ಪೊಂಗಲ್ ಹಬ್ಬ ಆಚರಣೆಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗಿ

ಪೊಂಗಲ್ ಹಬ್ಬ ಆಚರಣೆಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗಿ
ಚೆನ್ನೈ, ಜ 14 ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ದ ಮುಖ್ಯಸ್ಥ ಮೋಹನ್ ಭಾಗವತ್ ಇಂದು ಪೊಂಗಲ್ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದರು.
ಪೊನ್ನಿಯಮ್ಮನ್‍ ಮೇಡಿನಲ್ಲಿನ ಶ್ರೀ ಕಡುಂಬಾಡಿ ಚಿನ್ನಮ್ಮನ್‍ ದೇವಸ್ಥಾನದಲ್ಲಿ ದೇವಿಗೆ ಪೂಜೆ ಸಲ್ಲಿಸುವುದರೊಂದಿಗೆ ಭಾಗವತ್‍ ಅವರು ನಗರದಲ್ಲಿ ಪೊಂಗಲ್‍ ಆಚರಣೆಗಳನ್ನು ಆರಂಭಿಸಿದರು.

ಪೊಂಗಲ್ ಆಚರಣೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಮೋಹನ್ ಭಾಗವತ್ ಹೇಳಿದರು.
ತಮಿಳುನಾಡು ಹೊರತುಪಡಿಸಿ ಬೇರೆ ಯಾವ ರಾಜ್ಯವೂ ಮೂರು ದಿನಗಳ ಪೊಂಗಲ್‍ ಹಬ್ಬ ಆಚರಿಸುವುದಿಲ್ಲ. ಸೂರ್ಯ ದೇವರನ್ನು ಪೂಜಿಸುವುದು ಶ್ಲಾಘನೀಯ ಎಂದು ಅವರು ಹೇಳಿದರು.
ನಂತರ ಅವರು ಉಪನಗರ ಮೂಲಕಡೈನಲ್ಲಿ ಮತ್ತೊಂದು ಪೊಂಗಲ್ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಅವರ ಎರಡು ದಿನಗಳ ಭೇಟಿಯ ವೇಳೆ ಮೋಹನ್ ಭಾಗವತ್ ಯುವ ವೃತ್ತಿಪರರು ಮತ್ತು ನವೋದ್ಯಮಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ .ಅಲ್ಲದೆ, ಗಣ್ಯರೊಂದಿಗೆ ಸಂವಾದ ನಡೆಸುವ ಸಾಧ್ಯತೆಯಿದೆ. ಅಲ್ಲದೆ, ಆರ್‌ಎಸ್‌ಎಸ್ ನ ಸಂಘಟನಾ ಚಟುವಟಿಕೆಗಳ ಕುರಿತು ಸಂಘಟನೆಯ ಮುಖಂಡರೊಂದಿಗೆ ಪರಿಶೀಲನೆ ನಡೆಸಲಿದ್ದಾರೆ.

Leave a Reply

Your email address will not be published. Required fields are marked *