ಬರುವ ಶಿವರಾತ್ರಿಗೆ “ರಾಬರ್ಟ್” ತೆರೆಗೆ

ಬರುವ ಶಿವರಾತ್ರಿಗೆ “ರಾಬರ್ಟ್” ತೆರೆಗೆ
ಬೆಂಗಳೂರು, ಜ.10 : ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರಾಬರ್ಟ್’ ತೆರೆಗೆ ಬರಲು ದಿನಾಂಕ ದೃಢವಾಗಿದೆ.
ಬರುವ ಮಾ. 11 ರಂದು ಚಿತ್ರ ಪ್ರದರ್ಶನ ಕಾಣಲಿದೆ.
ಈ ಕುರಿತು ನಟ ದರ್ಶನ್, ತಮ್ಮ ಟ್ವೀಟರ್ ನಲ್ಲಿ ‘ರಾಬರ್ಟ್’ ಚಿತ್ರದ ಪೋಸ್ಟರ್ ಒಂದನ್ನು ಪೋಸ್ಟ್ ಮಾಡುವ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಮಹಾ ಶಿವರಾತ್ರಿಗೆ ಚಿತ್ರ ಬಿಡುಗಡೆ ಮಾಡಲಿದ್ದೇವೆ ಎಂಬುವುದರ ಮೂಲಕ ಚಿತ್ರ ಬಿಡುಗಡೆಯ ದಿನಾಂಕವನ್ನು ಬಹಿರಂಗಗೊಳಿಸಿದ್ದಾರೆ.
ತರುಣ್ ಸುಧೀರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ‌ ಬಾರಿಗೆ ಆಶಾ ಭಟ್ ದರ್ಶನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಉಮಾಪತಿ ಫಿಲ್ಮ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣಗೊಂಡಿದೆ.

,

Leave a Reply

Your email address will not be published. Required fields are marked *