ವಿವಾದಾತ್ಮಕ ಕೃಷಿ ಕಾನೂನು ಹಿಂಪಡೆಯಿರಿ: ರಾಹುಲ್ ಗಾಂಧಿ

ನವದೆಹಲಿ, ಆಗಸ್ಟ್ 27  ವಿವಾದಾತ್ಮಕ ಹೊಸ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. ದೆಹಲಿಯ ವಿವಿಧ ಗಡಿಗಳಲ್ಲಿ ರೈತರ ಪ್ರತಿಭಟನೆಗಳು ಒಂಬತ್ತು ತಿಂಗಳುಗಳನ್ನು ಪೂರೈಸಿದ ಒಂದು ದಿನದ ನಂತರ ಈ ಬೇಡಿಕೆ ಬಂದಿದೆ. ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮಾಜಿ ಕಾಂಗ್ರೆಸ್ ಅಧ್ಯಕ್ಷರು, ರೈತರ ಹೊಲಗಳನ್ನು “ನಾಶಮಾಡಲು” ಅಥವಾ “ಸರ್ಕಾರ ತನ್ನ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಲು ಬಿಡುವುದಿಲ್ಲ. ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಿ” ಎಂದು ಹೇಳಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ದೆಹಲಿಯ ಗಡಿಗಳಲ್ಲಿ ನೆಲೆಗೊಂಡಿರುವ ರೈತ ಗುಂಪುಗಳು ಗುರುವಾರ ಒಂಬತ್ತು ತಿಂಗಳ ಪ್ರತಿಭಟನೆಗಳನ್ನು ಪೂರ್ಣಗೊಳಿಸಿವೆ. ದೆಹಲಿಯ ಗಡಿಗಳಲ್ಲಿ ತಮ್ಮ ಒಂಬತ್ತು ತಿಂಗಳ ಪ್ರತಿಭಟನೆಗಳನ್ನು ಪೂರ್ಣಗೊಳಿಸಿದ ಗುರುವಾರ ಸಿಂಘು ಗಡಿಯಲ್ಲಿ ಅಖಿಲ ಭಾರತ ಸಮಾವೇಶವನ್ನು ಪ್ರತಿಭಟನಾ ನಿರತ ರೈತರು ನಡೆಸಿದ್ದಾರೆ. ಸಂಸತ್ತಿನಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸಿದ ವಿಷಯಗಳಲ್ಲಿ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಯೂ ಇದರಲ್ಲಿ ಸೇರಿದೆ. ಆಗಸ್ಟ್ 6 ರಂದು ಜಂತರ್ ಮಂತರ್ ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನಡೆಸಿದ ಅಣಕು ಸಂಸತ್ತಿಗೆ ವಿರೋಧ ಪಕ್ಷದ ನಾಯಕರು ಕೂಡ ಸೇರಿದ್ದರು.

,

Leave a Reply

Your email address will not be published. Required fields are marked *