ಜ.೨೬ರಂದು ದೆಹಲಿ ರಾಜಪಥದಲ್ಲಿ ಅನಾವರಣಗೊಳ್ಳಲಿದೆ ’ಕರ್ನಾಟಕ ಕರಕುಶಲ ಕಲಾ ವೈಭವ’

ಬೆಂಗಳೂರು, ಜ ೨೩(ಉದಯಕಾಲ) ರಾಷ್ಟ್ರ ರಾಜಧಾನಿ ದೆಹಲಿಯ ರಾಜಪಥದಲ್ಲಿ ಜನವರಿ ೨೬ರ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ‘ಕರ್ನಾಟಕ ಕರಕುಶಲ ಕಲಾ ವೈಭವ’ದ ವಿಶ್ವರೂಪ ದರ್ಶನವಾಗಲಿದೆ.

‘ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎನ್ನುವ ಧ್ಯೇಯದಡಿ ಸಿದ್ಧಗೊಂಡಿರುವ ಸ್ತಬ್ಧಚಿತ್ರ ಗಣರಾಜ್ಯೋತ್ಸವ ದಿನದ ಮೆರವಣಿಗೆಯಲ್ಲಿ ಸಾಗಲಿವೆ. ವಿಶ್ವಪ್ರಸಿದ್ಧ ಚನ್ನಪಟ್ಟಣದ ಗೊಂಬೆ, ಕಿನ್ನಾಳ ಗೊಂಬೆ, ಇಳಕಲ್ ಸೀರೆ, ಉಡುಪಿ ಸೀರೆ, ಮೈಸೂರು ಗಾಂಜೀಫ ಕಲೆಗಳೂ ಸೇರಿದಂತೆ ಜಿಐ ಟ್ಯಾಗ್ ಇರುವ ರಾಜ್ಯದ ೧೬ ಕರಕುಶಲ ವಸ್ತುಗಳು ಅನಾವರಣಗೊಳ್ಳಲಿವೆ.

ಕರ್ನಾಟಕದ ಕರಕುಶಲ ಕಲೆಗಳನ್ನು ಬಿಂಬಿಸುವ ಸ್ತಬ್ಧಚಿತ್ರ ಗಣರಾಜೋತ್ಸವ ದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ರಾಜ್ಯದ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಅಲ್ಲದೆ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರ ಇದಾಗಿದೆ. ಸತತ ೧೩ನೇ ವರ್ಷವೂ ಕರ್ನಾಟಕ ಟ್ಯಾಬ್ಲೋ ಗಣರಾಜ್ಯೋತ್ಸವದಲ್ಲಿ ಭಾಗಿಯಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.

,

Leave a Reply

Your email address will not be published. Required fields are marked *