ಸಮಗ್ರ ಅಭಿವೃದ್ಧಿಯ ಸದೃಢ ಕನ್ನಡ ನಾಡು ನಿರ್ಮಾಣಕ್ಕೆ ಸಂಕಲ್ಪ; ಬಸವರಾಜ ಬೊಮ್ಮಾಯಿ

ಸಮಗ್ರ ಅಭಿವೃದ್ಧಿಯ ಸದೃಢ ಕನ್ನಡ ನಾಡು ನಿರ್ಮಾಣಕ್ಕೆ ಸಂಕಲ್ಪ; ಬಸವರಾಜ
ಬೊಮ್ಮಾಯಿ
ಹಾವೇರಿ, ಜ.26 ಹೊಸ ಚಿಂತನೆ, ಹೊಸ ಕಲ್ಪನೆ ಹೊಸ ಕಾರ್ಯಗಳ
ಮೂಲಕ ಎಲ್ಲರನ್ನೂ ಒಳಗೊಂಡ ನಯಾ ಭಾರತ ನಿರ್ಮಾಣಕ್ಕೆ ಭಾರತದ
ಪ್ರಧಾನಮಂತ್ರಿಗಳು ಸಂಕಲ್ಪಮಾಡಿದ್ದಾರೆ. ಕರ್ನಾಟಕದಲ್ಲೂ ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಮಗ್ರ ಅಭಿವೃದ್ಧಿಯ ಸದೃಢ ಕನ್ನಡ ನಾಡು

ಕಟ್ಟುವ ಕೆಲಸ ಮಾಡುತ್ತೇವೆ ಎಂದು ಗೃಹ, ಕಾನೂನು ಹಾಗೂ ಸಂಸದೀಯ
ವ್ಯವಹಾರಗಳ ಖಾತೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ
ಬೊಮ್ಮಾಯಿ ತಿಳಿಸಿದ್ದಾರೆ.
72ನೇ ಭಾರತ ಗಣರಾಜ್ಯೋತ್ಸವ ಅಂಗವಾಗಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ
ಕ್ರೀಡಾಂಗಣದಲ್ಲಿ ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು
ಮಾತನಾಡಿದರು.
ಕಳೆದ ಒಂದೂವರೆ ವರ್ಷ ಸಂಕಷ್ಟದ ವರ್ಷದವಾಗಿ ಆಡಳಿತಕ್ಕೆ ಪರೀಕ್ಷೆಯ ಕಾಲ.
ಕೋವಿಡ್ ಹಾಗೂ ಪ್ರಾಕೃತಿಕ ವಿಕೋಪಗಳು ಕರ್ನಾಟಕದ ಆರ್ಥಿಕತೆಯನ್ನೇ ಅಲ್ಲಾಡಿಸಿದ
ವರ್ಷವಾಗಿದೆ. ಕೋವಿಡ್ ಕಾರಣದಿಂದ ದೇಶ ಸೇರಿದಂತೆ ವಿಶ್ವದ ಆರ್ಥಿಕತೆಯೇ
ಅಲ್ಲಾಡಿದೆ. ಈ ಸಂಕಷ್ಟಗಳ ದಾರಿಯಲ್ಲೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ
ನಮ್ಮ ಸರ್ಕಾರಗಳು ಕಾರ್ಯನಿರ್ವಹಿಸಿವೆ ಎಂದು ಹೇಳಿದರು.
ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ರಾಷ್ಟ್ರೀಯತೆ, ಎಲ್ಲರ
ಒಳಗೊಂಡಂತೆ ಅಭಿವೃದ್ಧಿ ಹಾಗೂ ಆಂತರಿಕ ಹಾಗೂ ಬಾಹ್ಯ ಸುರಕ್ಷತೆಯ ಮೂರು
ಅಂಶಗಳ ಆಧಾರದ ಮೇಲೆ ನಯಾ ಭಾರತದ ನಿರ್ಮಾಣಕ್ಕೆ ಕರೆ ಕೊಟ್ಟಿದ್ದಾರೆ. ಈ
ಮಾದರಿಯಲ್ಲಿ ರಾಜ್ಯದ ಅಭಿವೃದ್ಧಿಯ ಕಾರ್ಯಗಳು ಮುಂದುವರೆದಿವೆ ಎಂದು ಹೇಳಿದರು.
ಕೋವಿಡ್ ಸಂಕಷ್ಟವನ್ನು ಸೈದ್ಧಾಂತಿಕವಾಗಿ ಎದುರಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ
ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು
ಕೇಂದ್ರಗಳಲ್ಲಿ ಐ.ಸಿ.ಯು. ಲ್ಯಾಬ್, ಆಕ್ಸಿಜನ್ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆ ಸೇರಿದಂತೆ
ಪ್ರಮುಖ ಸುಧಾರಣೆ ತರಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ 797 ಲಕ್ಷ
ರೂ. ಅನುದಾನ ಬಳಸಿ 12,669 ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ. 364 ಲಕ್ಷ
ರೂ. ವೆಚ್ಚದಲ್ಲಿ 1787 ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಇ ಸಂಜೀವಿನಿ
ಟೆಲಿಮೆಡಿಷನ್ ಯೋಜನೆಯಡಿ 3184 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಈವರೆಗೆ

11,250 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 11,046 ಜನ
ಗುಣಮುಖರಾಗಿದ್ದಾರೆ. 8280 ಡೋಸ್ ಕೋವಿಡ್ ಲಸಿಕೆ ಜಿಲ್ಲೆಗೆ ಪೂರೈಕೆಯಾಗಿದ್ದು,
ಈಗಾಗಲೇ 3387 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದರು.
ಮುಂದಿನಮ ಶೈಕ್ಷಣಿಕ ವರ್ಷಾರಂಭದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಬಳಸಿಕೊಂಡು
ವೈದ್ಯಕೀಯ ತರಗತಿಗಳನ್ನು ಆರಂಭಿಸಲು ಪ್ರಯತ್ನಿಸಲಾಗುವುದು. ಈ ವರ್ಷಾಂತ್ಯಕ್ಕೆ
ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗುವುದು. ಶಿಗ್ಗಾಂವಿಯಲ್ಲಿ
ಜವಳಿ ಪಾರ್ಕ್ ವರ್ಷಾಂತಕ್ಕೆ ಪೂರ್ಣಗೊಳಿಸಿ ಮೂರರಿಂದ ಐದುಸಾವಿರ
ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಲಾಗುವುದು. ಜಿಲ್ಲೆಯ
ಪ್ರವಾಸೋದ್ಯಮದ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬಂಕಾಪುರ ನವಿಲು
ಧಾಮವನ್ನು ಉನ್ನತೀಕರಿಸಲಾಗುವುದು. ಉದ್ಯೋಗಖಾತ್ರಿ ಯೋಜನೆಯನ್ನು
ಅರ್ಥಪೂರ್ಣವಾಗಿ ಹಾಗೂ ಜನೋಪಯೋಗಿ ಕಾರ್ಯಕ್ರಮವಾಗಿ ರೂಪಿಸಲು ಸೂಚನೆ
ನೀಡಲಾಗಿದೆ. ಶೀಘ್ರವೇ ವಿಜನ್ 2021-2025 ಯೋಜನೆ ರೂಪಿಸಿ ಜಿಲ್ಲೆಯ ಸಮಗ್ರ
ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ವಿಶ್ವ ಆರ್ಥಿಕ ಒಪ್ಪಂದ ಪ್ರಕಾರ ಮುಕ್ತ ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮ
ಬೆಲೆದೊರಕಿಸಿಕೊಡಲು ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ
ಭಿನ್ನಾಭಿಪ್ರಾಯಗಳು ಸಹಜ. ಒಟ್ಟಾಗಿ ಕೂತು ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾಗಿದೆ.
ರೈತರ ಅನುಕೂಲಕ್ಕಾಗಿ ಸಬ್ಸಿಡಿ ಸಾಲ, ಬಡ್ಡಿ ರಹಿತ ಸಾಲ, ಸಬ್ಸಿಡಿ ಯೋಜನೆಳನ್ನು
ಜಾರಿಗೊಳಿಸಲಾಗಿದೆ. ರೈತಪರವಾದ ನಮ್ಮ ಸರ್ಕಾರ ಕಳೆದ ಸಾಲಿನ ಮುಂಗಾರು
ಹಂಗಾಮಿನ ಬೆಳೆವಿಮೆ ಪರಿಹಾರವಾಗಿ 76,000 ರೈತರಿಗೆ 179 ಕೋಟಿ ರೂ. ಹಾಗೂ
ಹಿಂಗಾರು ಹಂಗಾಮಿನಲ್ಲಿ 30 ಕೋಟಿ ರೂ. ಅನುದಾನವನ್ನು 293 ರೈತರಿಗೆ ಪರಿಹಾರ
ನೀಡಲಾಗಿದೆ. ನೀರಾವರಿ ಕ್ಷೇತ್ರಕ್ಕೆ 7300 ಕೋಟಿ ರೂ.ಗಳನ್ನು ಜಿಲ್ಲೆಗ ನೀಡಲಾಗಿದೆ.

2021ರ ವರ್ಷಾಂತ್ಯಕ್ಕೆ ಜಿಲ್ಲೆಯ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದು
ಹೇಳಿದರು.
ಸ್ವಚ್ಛ ಭಾರತ, ಗ್ರಾಮೀಣ ಆವಾಸ್ ಯೋಜನೆ, ಗ್ರಾಮೀಣ ವಿದ್ಯುದ್ದೀಕರಣ ಯೋಜನೆ,
ಗ್ರಾಮಸಡಕ್ ಯೋಜನೆ, ಉಜ್ವಲ್ ಯೋಜನೆ ಗಳು ನಿರ್ಲಕ್ಷಿತ ವಲಯದ ಏಳಿಗೆಗಾಗಿ
ರೂಪಿಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಜನವರಿ 26 ಭಾರತಕ್ಕೆ ಸಂವಿಧಾನ ಸಿಕ್ಕ ದಿನ, ಆಡಳಿತ ವ್ಯವಸ್ಥೆ ಸಿಕ್ಕ ದಿನ, ವಿಶ್ವಕ್ಕೆ
ಮಾದರಿಯಾದ ದೊಡ್ಡ ಲಿಖಿತ ಸಂವಿಧಾನವನ್ನು ಜಾರಿಗೆ ತಂದದಿನ. ಸ್ವತಂತ್ರ
ಭಾರತಕ್ಕೊಂದು ಸದೃಢ ಸಂವಿಧಾನ ಕಟ್ಟಿಕೊಟ್ಟದ್ದು ಡಾ. ಬಿ.ಆರ್.ಅಂಬೇಡ್ಕರ್
ನೇತೃತ್ವದ ಹಿರಿಯರ ತಂಡ. ಅವರ ಅವಿರತ ಪ್ರಯತ್ನ ಫಲವಾಗಿ ವಿಶ್ವಕ್ಕೆ
ಮಾದರಿಯಾಗಿರುವ ನಮ್ಮ ಸಂವಿಧಾನ ರೂಪುಗೊಂಡಿದೆ. ಇವರನ್ನು
ಹೃದಯಪೂರ್ವಕವಾಗಿ, ಚಿರಸ್ಮರಣೀಯವಾಗಿ ಅಭಿನಂದಿಸುತ್ತೇನೆ ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಪಡೆದವರನ್ನು ಅಭಿನಂದಿಸುತ್ತ
ಕರ್ನಾಟಕದ ಚಂದ್ರಶೇಖರ ಕಂಬಾರ ಹಾಗೂ ವೈದ್ಯ ಬಿ.ಎಂ. ಹೆಗಡೆ ಅವರಿಗೆ
ಅಭಿನಂದಿಸಿದರು.
ಸಮಾರಂಭದಲ್ಲಿ ಜನಪದ ಕಲಾವಿದ ಬಸವರಾಜ ಶಿಗ್ಗಾಂವ, ಉದಯವಾಣಿ
ದಿನಪತ್ರಿಕೆಯ ಜಿಲ್ಲಾ ವರದಿಗಾರ ವಿರೇಶ ಮಡ್ಲೂರ ಹಾಗೂ ಟಿವಿ-9 ಮಾಧ್ಯಮದ
ವಿಡಿಯೋ ಜರ್ನಲಿಸ್ಟ್ ರವಿ ಹೂಗಾರ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುಂಚೆ
ಆಕರ್ಷಕ ಪಥಸಂಚಲನ ಹಾಗೂ ಧ್ವಜ ವಂದನೆ ಕಾರ್ಯಕ್ರಮದಲ್ಲಿ ಗೃಹ ಸಚಿವರು
ಭಾಗವಹಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಏಕನಾಥ ಬಾನುವಳ್ಳಿ, ಶಾಸಕರು ಹಾಗೂ
ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಯೋಗದ
ಅಧ್ಯಕ್ಷರಾದ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ,

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಸಂಜಯ
ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ
ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಅಪರ ಜಿಲ್ಲಾಧಿಕಾರಿ
ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ
ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *