ನಟ ಶಿವಾಜಿ ಗಣೇಶನ್ ಪುಣ್ಯಸ್ಮರಣೆ

ನಟ ಶಿವಾಜಿ ಗಣೇಶನ್ ಪುಣ್ಯಸ್ಮರಣೆ

ಪುದುಚೇರಿ, ಜುಲೈ 21 ಖ್ಯಾತ ನಟ ದಿವಂಗತ ಶಿವಾಜಿ ಗಣೇಶನ್ ಅವರ 19ನೇ ಪುಣ್ಯತಿಥಿಯ ಪ್ರಯುಕ್ತ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
ಪುದುಚೇರಿ ಕಂದಾಯ ಸಚಿವ ಕೆ ಲಕ್ಷ್ಮೀನಾರಾಯಣನ್ ಮತ್ತು ಶಾಸಕರು ನಟನ ಪ್ರತಿಮೆಗೆ ಬುಧವಾರ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಅವರ ಅಲಂಕೃತ ಭಾವಚಿತ್ರಕ್ಕೆ ಶಿವಾಜಿ ಮತ್ತು ನಟ ಪ್ರಭು ಅಭಿಮಾನಿಗಳ ಸಂಘಗಳು ಗೌರವಪೂರ್ವಕ ಪುಷ್ಪನಮನ ಸಲ್ಲಿಸಿದವು.
ಪ್ರಭು ಅವರು ಶಿವಾಜಿ ಗಣೇಶನ್ ಅವರ ಪುತ್ರನಾಗಿದ್ದು, ಜನಪ್ರಿಯ ನಟರಾಗಿದ್ದಾರೆ.

,

Leave a Reply

Your email address will not be published. Required fields are marked *