ನೋಂದಣಿ ಕಡ್ಡಾಯ ಬೇಡ, ಎಲ್ಲರಿಗೂ ಲಸಿಕೆ ನೀಡಿ ; ರಾಹುಲ್‌ಗಾಂಧಿ

ನೋಂದಣಿ ಕಡ್ಡಾಯ ಬೇಡ, ಎಲ್ಲರಿಗೂ ಲಸಿಕೆ ನೀಡಿ ; ರಾಹುಲ್‌ಗಾಂಧಿ

ನವದೆಹಲಿ, ಜೂನ್‌10 ದೇಶದಲ್ಲಿ ಕೊರೊನಾ ನಿರೋಧಕ ಲಸಿಕೆ ಎಲ್ಲಾ ವರ್ಗಗಳ ಜನರಿಗೆ ತಲುಪುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಲಸಿಕೆ ಹಾಕಿಸಿಕೊಳ್ಳಬೇಕೆಂದರೆ ಕೋವಿನ್‌ ಅಪ್ಲಿಕೇಶನ್‌ ನಲ್ಲಿ ನೋಂದಣಿ ಮಾಡಿಸಿರಬೇಕು. ಆದರೆ, ಗ್ರಾಮೀಣ, ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಜನರು ಹಾಗೂ ಬಡವರಿಗೆ ಡಿಜಿಟಲ್ ಸೌಲಭ್ಯಗಳಿಲ್ಲದ ಕಾರಣ ನೋಂದಣಿ ಸಾಧ್ಯವಾಗುತ್ತಿಲ್ಲ ಎಂದು ಅವರು ಗುರುವಾರ ಟ್ವೀಟ್ ಮಾಡಿದ್ದಾರೆ.
ಲಸಿಕೆ ಹಾಕಿಸಿಕೊಳ್ಳಲು ಆನ್‌ಲೈನ್ ನೋಂದಣಿ ಕಡ್ಡಾಯಗೊಳಿಸಬಾರದು. ವ್ಯಾಕ್ಸಿನೇಷನ್ ಕೇಂದ್ರಕ್ಕೆ ಬರುವ ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇಂಟರ್ನೆಟ್ ಮೂಲಕ ಕೋವಿನ್‌ ಅಪ್ಲಿಕೇಷನ್‌ನಲ್ಲಿ ನೋಂದಣಿ ಆಗದ ವ್ಯಕ್ತಿಗೂ ಲಸಿಕೆ ಹಾಕಿಸಿಕೊಳ್ಳುವ ಹಕ್ಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಬಡವರು … ಸ್ಮಾರ್ಟ್ ಫೋನ್ ಹಾಗೂ ಡಿಜಿಟಲ್ ಸೌಲಭ್ಯಗಳಿಲ್ಲದವರು, ಲಸಿಕೆ ಪಡೆದು ಕೊಳ್ಳಲು ಸಾಧ್ಯವಾಗುವಂತೆ ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ. ಕೋವಿನ್‌ನಲ್ಲಿ ನೋಂದಣಿ ಆಗಲು ಸಾಧ್ಯವಿಲ್ಲದ ಕಾರಣ, ಇಂಟರ್ನೆಟ್ ಸೌಲಭ್ಯವಿಲ್ಲದವರಿಗೆ ವಿನಾಯಿತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

, ,

Leave a Reply

Your email address will not be published. Required fields are marked *