ಮಾ.31ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ ರಾಹುಲ್ ಗಾಂಧಿ

ಬೆಂಗಳೂರು: ಮಾರ್ಚ್ 29 (ಉದಯಕಾಲ ನ್ಯೂಸ್) ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಶಿವಕುಮಾರ ಸ್ವಾಮೀಜಿಯ 115 ನೇ ಜಯಂತಿ ಕಾರ್ಯಕ್ರಮ ನಿಮಿತ್ತ 31 ನೇ ತಾರೀಖು ಮದ್ಯಾಹ್ನ 2.30ಕ್ಕೆ ಬೆಂಗಳೂರಿಗೆ ಬರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದರು.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, ಕರ್ನಾಟಕಕ್ಕೆ ಬರುತ್ತಿರುವ ರಾಹುಲ್ ಗಾಂಧಿ ಅವರು, ಬಿಬಿಎಂಪಿಗೆ ಸಂಬಂಧಪಟ್ಟಂತ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೂಮ್ ಮುಖಾಂತರ ಹಿರಿಯ ನಾಯಕರು, ಸದಸ್ಯರ ಜೊತೆ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಇದುವರೆಗೆ ಸುಮಾರು 47 ಲಕ್ಷ ಜನ‌ ಕಾಂಗ್ರೆಸ್ ಪಕ್ಷಕ್ಕೆ ಸದಸ್ಯರಾಗಿದ್ದಾರೆ ಎಂದು ಹೇಳಿದರು.

ಮಾ.31ರಂದು ಇಡೀ ರಾಜ್ಯದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬೆಲೆ ಏರಿಕೆ ಬಗ್ಗೆ ಹೋರಾಟ ಮಾಡುತ್ತಿದ್ದೇವೆ. ಮನೆ ಮುಂದೆ ಮೋಟಾರ್‌ ಬೈಕು ಹಾಗೂ ಗ್ಯಾಸ್ ಸಿಲಿಂಡರ್ ಇಟ್ಟು ಅದಕ್ಕೆ ಹೂವಿನ ಹಾರ ಹಾಕಿ, ಜಾಗಟೆ ಬಾರಿಸಿ ಅದೊಂದು ಪೋಟೊ ತೆಗೆದು ಪ್ರಧಾನಿ ಅವರಿಗೆ ಪೋಸ್ಟ್ ಮಾಡಬೇಕಾಗಿದೆ ಎಂದರು.

ಇನ್ನು ಟಿಪ್ಪು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ದೇಶದ ಇತಿಹಾಸವನ್ನು ಯಾರು ಬದಲಾವಣೆ ಮಾಡುವುದಕ್ಕೆ ಆಗುವುದಿಲ್ಲ. ಈ ದೇಶದ ರಾಷ್ಟ್ರಪತಿಗಳೇ ಟಿಪ್ಪು ಬಗ್ಗೆ ಕಳೆದ ಬಾರಿ ಸದನದಲ್ಲಿ ಹಾಡಿ ಹೊಗಳಿದಾರೆ

ಸಮಿತಿಯಲ್ಲಿ ಇರುವವರು ಪ್ರಜ್ಞೆ ಇರುವವರು, ಯಾರೂ ಕೂಡ ತಿರೋಚದಕ್ಕೂ ಆಗಲ್ಲ ಮೈಸೂರು ಹುಲಿ ಅಂತ ನಾವು ಕೊಟ್ಟಿಲ್ಲ ಬ್ರಿಟಿಷರು ಕೊಟ್ಟಿದ್ದು ಎಂದು ಹೇಳಿದರು.

,

Leave a Reply

Your email address will not be published. Required fields are marked *