ಮತ್ತೆ ಐದು ದಿನ ಪೊಲೀಸ್​​ ಕಸ್ಟಡಿಗೆ ರಾಗಿಣಿ -ನ್ಯಾಯಾಲಯ ಆದೇಶ

ಬೆಂಗಳೂರು- ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಸಿದಂತೆ ಸಿಸಿಬಿ ವಶದಲ್ಲಿರುವ ಚಿತ್ರನಟಿ ರಾಗಿಣಿ ದ್ವಿವೇದಿ ಅವರನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಸಿದಂತೆ ಸಿಸಿಬಿ ವಶದಲ್ಲಿರುವ ರಾಗಿಣಿ ದ್ವಿವೇದಿ ಅವರು ಮಹಿಳಾ ಸಾಂತ್ವಾನ ಕೇಂದ್ರದಲ್ಲಿದ್ದು, ಅಲ್ಲಿಂದಲೇ ವಿಡಿಯೋ ಕಾನರೆನ್ಸ್ ಮೂಲಕ ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾದಿೀಶರಾದ ಜಗದೀಶ್ ಅವರು ಐದು ದಿನಗಳ ಕಾಲ ರಾಗಿಣಿ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲು ಆದೇಶಿಸಿದರು.

ಡ್ರಗ್ಸ್ ಪ್ರಕರಣ ತೀವ್ರ ಗಂಭೀರವಾಗಿದ್ದು, ರಾಗಿಣಿ ಅವರನ್ನು ಮತ್ತಷ್ಟು ವಿಚಾರಣೆ ಮಾಡುವ ಅಗತ್ಯವಿದೆ. ಇನ್ನು ಕೆಲವು ದಿನಗಳ ಕಾಲ ನಮ್ಮ ವಶಕ್ಕೆ ನೀಡಬೇಕೆಂದು ಸಿಸಿಬಿ ಅಕಾರಿಗಳು, ನ್ಯಾಯಾೀಶರ ಮುಂದೆ ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

ಪ್ರಕರಣಕ್ಕೆ ಸಂಬಂಸಿದಂತೆ ವಿಚಾರಣೆ ನಡೆಸುವುದು, ಪ್ರಶ್ನೆಗಳನ್ನು ಕೇಳುವುದು ಸಾಕಷ್ಟು ಬಾಕಿ ಇದೆ. ವಿಚಾರಣೆಗೆ ಅವರು ಸಂಪೂರ್ಣವಾಗಿ ಸಹಕರಿಸಿಲ್ಲ. ಹಾಗಾಗಿ ಇನ್ನಷ್ಟು ದಿನಗಳ ಕಾಲ ಅವರನ್ನು ನಮ್ಮ ವಶಕ್ಕೆ ನೀಡಬೇಕೆಂದು ಸಿಸಿಬಿ ಕೋರಿದ್ದರು.

ಈ ಸಂದರ್ಭದಲ್ಲಿ ಅವರಿಗೆ ಜಾಮೀನು ನೀಡಿದರೆ ತನಿಖೆಯ ದಾರಿ ತಪ್ಪುವ ಸಾಧ್ಯತೆ ಇದೆ. ಹಾಗಾಗಿ ಹೆಚ್ಚಿನ ವಿಚಾರಣೆಗೆ ನಮ್ಮ ವಶಕ್ಕೆ ನೀಡಬೇಕೆಂದು ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ರಾಗಿಣಿ ದ್ವಿವೇದಿ ಅವರನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ಈಗಾಗಲೇ ಸಿಸಿಬಿ ವಶದಲ್ಲಿದ್ದು, ಮಹಿಳಾ ಸಾಂತ್ವಾನ ಕೇಂದ್ರದಲ್ಲಿರುವ ರಾಗಿಣಿ ಅವರು ಇನ್ನು ಐದು ದಿನಗಳ ಕಾಲ ಸಿಸಿಬಿ ಕಸ್ಟಡಿಯಲ್ಲೇ ಇದ್ದು ವಿಚಾರಣೆ ಎದುರಿಸಬೇಕಾಗಿದೆ.

Leave a Reply

Your email address will not be published. Required fields are marked *