ರಫೇಲ್​ ವಾಯುಪಡೆಗೆ ಸೇರ್ಪಡೆ: ಅಂಬಾಲ ವಾಯುನೆಲೆಗೆ ಬಂದಿಳಿದ ಭಾರತ-ಫ್ರಾನ್ಸ್​ ರಕ್ಷಣಾ ಸಚಿವರು

ನವದೆಹಲಿ: ಫ್ರಾನ್ಸ್​ನಿಂದ ಭಾರತಕ್ಕೆ ಆಗಮಿಸಿರುವ ಐದು ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲು ಅಂಬಾಲಾ ವಾಯುನೆಲೆಯಲ್ಲಿ ಸಿದ್ಧವಾಗಿವೆ.

ರಕ್ಷಣಾ ಸಚಿವ ರಾಜನಾಥ ಸಿಂಗ್, ಫ್ರಾನ್ಸ್​ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹರಿಯಾಣದ ಅಂಬಾಲ ವಾಯುನೆಲೆಯತ್ತ ತೆರಳಿದ್ದಾರೆ. ಕಾರ್ಯಕ್ರಮದಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಸಹ ಹಾಜರಿರಲಿದ್ದಾರೆ. ರಾಜನಾಥ್​ ಸಿಂಗ್​ ಅವರು ರಫೇಲ್​ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಯ 17 ಸ್ಕ್ವಾಡ್ರನ್​ ಗೋಲ್ಡನ್​ ಆಯರೋಸ್​ಗೆ ಔಪಚಾರಿಕವಾಗಿ ಭಾರತೀಯ ವಾಯುಪಡೆಗೆ ಸೇರಿಸಲಿದ್ದಾರೆ.

ಕಾರ್ಯಕ್ರಮದ ಬಳಿಕ ರಾಜನಾಥ ಸಿಂಗ್ ಹಾಗೂ ಪಾರ್ಲಿ ದ್ವಿಪಕ್ಷೀಯ ಸಭೆ ನಡೆಸಲಿದ್ದು, ರಕ್ಷಣಾ ಸಹಕಾರ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ

Leave a Reply

Your email address will not be published. Required fields are marked *