ವಿವಿಧ ವಸತಿ ಯೋಜನೆಯಡಿ ತಾಲೂಕು ಅಭಿವೃದ್ಧಿಗೆ ಪ್ರಸ್ತಾವನೆ; ಶಾಸಕ ಹೆಚ್. ನಾಗೇಶ್

ವಿವಿಧ ವಸತಿ ಯೋಜನೆಯಡಿ ತಾಲೂಕು ಅಭಿವೃದ್ಧಿಗೆ ಪ್ರಸ್ತಾವನೆ; ಶಾಸಕ ಹೆಚ್. ನಾಗೇಶ್

ಮುಳಬಾಗಲು: ತಾಲೂಕಿನ ಪ್ರತಿ ಗ್ರಾ.ಪಂಗೆ ವಿವಿಧ ವಸತಿ ಯೋಜನೆಯಡಿ ೩೫ ಮನೆಗಳು ಮಂಜೂರಾಗಿದ್ದು, ಇನ್ನೂ ಹೆಚ್ಚಿನ ಮನೆಗಳನ್ನು ಮಂಜೂರು ಮಾಡುವಂತೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡಲು ಈಗಾಗಲೇ ತೀರ್ಮಾನಿಸಲಾಗಿದೆ. ಪ್ರತಿ ಹಳ್ಳಿಗೂ ಸಂಪರ್ಕ ರಸ್ತೆಗಳನ್ನು ನಿರ್ಮಿಸಿಕೊಡುವುದಾಗಿ ಶಾಸಕ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್. ನಾಗೇಶ್ ತಿಳಿಸಿದ್ದಾರೆ.
ತಾಲೂಕಿನ ಕೆ. ಬಯಪಲ್ಲಿ ರಸ್ತೆಯ ಪಿ. ವೆಂಕಟಾಪುರ ಗ್ರಾಮದಲ್ಲಿ ೭೦ ಲಕ್ಷ ರೂ ವೆಚ್ಚದಲ್ಲಿ ಡಾಂಬರೀಕರಣ ಹಾಗೂ ಕಸವಿರೆಡ್ಡಿಹಳ್ಳಿ ಗ್ರಾಮದಲ್ಲಿ ೨ ಹೈಮಾಸ್ಡ್ ವಿದ್ಯುತ್ ದೀಪಗಳು ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನಲ್ಲಿ ಯಾವುದೇ ಹಳ್ಳಿಯಲ್ಲಿ ಮಣ್ಣು ರಸ್ತೆ ಇಲ್ಲದಂತೆ ಸಿಸಿ ಮತ್ತು ಡಾಂಬರೀಕರಣ ರಸ್ತೆಗಳನ್ನು ನಿರ್ಮಿಸಿಕೊಡುವ ಜೊತೆಗೆ ಮೂಲಸೌಲಭ್ಯಗಳನ್ನು ಒದಗಿಸುವುದಾಗಿ ಬರವಸೆ ನೀಡಿದರು.
ಮಹಾ ಮಾರಿ ಕೊರೊನಾ ಹರಡದಂತೆ ಪ್ರತಿಯೊಬ್ಬರು ಸರಕಾರದ ನಿಯಮಗಳನ್ನು ಪಾಲಿಸಬೇಕು ೨ ನೇ ಅಲೆ ಮುಗಿದಿದೆ ಎಂದು ಮೈ ಮರೆತರೆ ಮತ್ತೆ ಸೋಂಕು ಹರಡುತ್ತದೆ ಎಂದು ಎಚ್ಚರಿಸಿದರಲ್ಲದೆ ಮಹಾ ಮಾರಿ ಇಡೀ ಪ್ರಪಂಚದಲ್ಲೇ ವಿನಾಶ ವಾಗಲಿ ಎಂದು ತಿಳಿಸಿದರು.
ತಹಸೀಲ್ದಾರ್ ಕೆ.ಎನ್. ರಾಜಶೇಖರ್, ತಾ.ಪಂ ಮಾಜಿ ಸದಸ್ಯ ಡಾ, ಸಿ.ಎನ್. ಪ್ರಕಾಶ್, ಮುಖಂಡ ಸಿ.ಎಂ ರಾದಾಕೃಷ್ಣ, ತಾ.ಪಂ ಮಾಜಿ ಅಧ್ಯಕ್ಷ ಎಂ. ವೆಂಕಟರವಣ, ಕೆಪಿಸಿಸಿ ಸದಸ್ಯ ವೆಂಕಟಪ್ಪ, ನಾಗಮಂಗಳ ಶಂಕರಪ್ಪ, ಗ್ರಾ.ಪಂ ಅಧ್ಯಕ್ಷೆ ಅಲವೇಲಮ್ಮ, ಉಪಾಧ್ಯಕ್ಷ ಸುನೀಲ್, ಗ್ರಾ.ಪಂ ಸದಸ್ಯರಾದ ರತ್ನಮ್ಮ ರಘುಪತಿ, ವೆಂಕಟರೆಡ್ಡಿ, ಮಂಜುನಾಥ್ ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *