ಮುಂಬೈ: ಜನೆವರಿ 22 (ಉದಯಕಾಲ) ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗು ಪಡೆದುಕೊಂಡಿದ್ದಾರೆ.
ಖುದ್ದಾಗಿ ಈ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ ಘೋಷಿಸಿರುವ ಪ್ರಿಯಾಂಕಾ, ಬಾಡಿಗೆ ತಾಯ್ತನದ ಮೂಲಕ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದೇವೆ. ದಯವಿಟ್ಟು ನನ್ನ ಕುಟುಂಬದ ಮೇಲೆ ವಿಶೇಷ ಗಮನವಹಿಸಬೇಕಾದ ಕಾರಣ ನಮ್ಮ ಖಾಸಗಿ ಸಮಯವನ್ನು ಗೌರವಿಸಿ ಎಂದು ಹೇಳಿ ಧನ್ಯವಾದ ಸಲ್ಲಿಸಿದ್ದಾರೆ.
ಮೂಲಗಳ ಪ್ರಕಾರ 12 ವಾರಗಳ ಮುಂಚೆಯೇ ಅಂದರೆ ಅವಧಿಪೂರ್ವವೇ ಹೆಣ್ಣು ಮಗು ದಕ್ಷಿಣ ಕ್ಯಾಲಿಫೋರ್ನಿಯಾ ಆಸ್ಪತ್ರೆಯಲ್ಲಿ ಜನಿಸಿದೆ. ಹಾಗಾಗಿ ಪುಟ್ಟ ಮಗು ಇನ್ನೂ ಆಸ್ಪತ್ರೆಯಲ್ಲಿದೆ. ಆರೋಗ್ಯ ಸುಧಾರಿಸುವವರೆಗೂ ಮಗು ಆಸ್ಪತ್ರೆಯಲ್ಲಿಯೇ ಇರಲಿದೆ ಎಂದು ತಿಳಿದು ಬಂದಿದೆ. ಎಂದು ವರದಿಯಾಗಿದೆ.
ಪ್ರಿಯಾಂಕಾ ಮತ್ತು ನಿಕ್ ಬಹಳ ಸಮಯದಿಂದ ಮಗುವನ್ನು ಹೊಂದಲು ಯೋಜಿಸಿದ್ದರು. ಆದರೆ ಅವರ ಬಿಡುವಿಲ್ಲದ ಕಾರಣ, ಮಗುವಿನ ವಿಚಾರವನ್ನು ವಿಳಂಬಗೊಳಿಸುತ್ತಲೇ ಇದ್ದರು. ನಂತರ ಬಾಡಿಗೆ ತಾಯ್ತನವನ್ನು ಆರಿಸಿಕೊಂಡರು. ಅವರು ದಕ್ಷಿಣ ಕ್ಯಾಲಿಫೋರ್ನಿಯಾದ ಮಹಿಳೆಯೊಂದಿಗೆ ಸಂಪರ್ಕ ಸಾಧಿಸಿ ಮುದ್ದಾದ ಮಗುವನ್ನು ಪಡೆದುಕೊಂಡಿದ್ದಾರೆ.