ಕಮಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಭು ಚವ್ಹಾಣ್ ಭೇಟಿ

ಕಮಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಭು ಚವ್ಹಾಣ್ ಭೇಟಿ


ಬೀದರ್, ಮೇ 15  ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಕೋವಿಡ್ ಹಿನ್ನೆಲೆಯಲ್ಲಿ 
ಶನಿವಾರ ಜಿಲ್ಲೆಯ ಕಮಲನಗರ ತಾಲೂಕಿಗೆ ಭೇಟಿ ನೀಡಿದರು.


ಅಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ಅಲ್ಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೋವಿಡ್ ತಡೆಗೆ ಕೈಗೊಂಡ 
ಕ್ರಮಗಳು ಸೇರಿ ಹಲವಾರು ವಿಷಯಗಳನ್ನು ಚರ್ಚಿಸಿದರು.


ಈ ಸಮುದಾಯ ಕೇಂದ್ರದಲ್ಲಿ 24 ಹಾಸಿಗೆವುಳ್ಳ ಕೋವಿಡ್ ಕೇಂದ್ರ ಆರಂಭಿಸಿದ್ದು, ಇಲ್ಲಿಯವರೆಗೆ 6 ಕೋವಿಡ್ ಸೋಂಕಿತ ರೋಗಿಗಳು ದಾಖಲಾಗಿ, 
ಚಿಕಿತ್ಸೆ ಪಡೆದು ಗುಣಮುಖ ಹೊಂದಿ ಮನೆಗೆ ವಾಪಸ್ಸಾಗಿದ್ದಾರೆ. ಸದ್ಯ ಯಾವುದೇ ಕೋವಿಡ್ ರೋಗಿಗಳು ದಾಖಲಾಗಿಲ್ಲ 
ಎಂದು ಸಚಿವರಿಗೆ ಅಲ್ಲಿನ ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.


ಇಲ್ಲಿಯವರಗೆ ಕೋವಿಶಿಲ್ಡ್ 2891 ಮತ್ತು ಕೋವ್ಯಾಕ್ಸಿನ್-941 ನೀಡಲಾಗಿದ್ದು, ಇದರಲ್ಲಿ ಮೊದಲನೇ ಡೋಸ್-777 ಮತ್ತು ಎರಡನೇ ಡೋಸ್-773 
ನೀಡಲಾಗಿದೆ ಎಂದು ಮಾಹಿತಿ ನೀಡಿದ ಅವರು, ಜನರ ಬೇಡಿಕೆಯಂತೆ ಈ ಆಸ್ಪತ್ರೆಗೆ ತಜ್ಞ ವೈದ್ಯರ ಅಗತ್ಯತೆ ಇದೆ ಎಂದು ವೈದ್ಯಾಧಿಕಾರಿಗಳು 
ಸಚಿವರಿಗೆ ತಿಳಿಸಿದರು. 


ಈ  ಸಮುದಾಯ ಆರೋಗ್ಯ ಕೇಂದ್ರಕ್ಕೆ ಅವಶ್ಯವಿರುವ ಆಕ್ಸಿಜನ್ ಸಿಲೆಂಡರಗಳನ್ನು ಔರಾದಿಂದ ತರಿಸಿಕೊಡಲು 
ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿ ಡಾ.ಜಹೀರಾ ನಸೀಮ್, 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಡಾ.ವಿ.ಜಿ.ರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಶರಣಯ್ಯ ಮತ್ತಿತರಿದ್ದರು.
, ,

Leave a Reply

Your email address will not be published. Required fields are marked *