ಶಿಲ್ಪಾ ಶೆಟ್ಟಿ ವಿರುದ್ಧದ ಜಾತಿ ನಿಂದನೆ ಪ್ರಕರಣ ವಜಾಗೊಳಿಸಿದ ಕೋರ್ಟ್!
ಬಾಲಿವುಡ್ ನಟಿ ಶಿಲ್ಪಾ ವಿರುದ್ಧದ `ಜಾತಿ ನಿಂದನೆ ಮಾಡಿದ ಹೇಳಿಕೆ ವಿರುದ್ಧದ ಪ್ರಕರಣವನ್ನು ರಾಜಸ್ಥಾನ್ ಹೈಕೋರ್ಟ್ ವಜಾಗೊಳಿಸಿದೆ.
2013ರ ಟಿವಿ ಕಾರ್ಯಕ್ರಮದಲ್ಲಿ ನಟ ಸಲ್ಮಾನ್ ಖಾನ್ ಕೂಡ ಹಾಜರಿದ್ದ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ಜಾತಿವಾದಿ ಜಗತ್ತು ಇದು ಎಂದು ನೀಡಿದ್ದ ಹೇಳಿಕೆ ವಿರುದ್ಧ ದೂರು ದಾಖಲಾಗಿತ್ತು.
ಡಿಸೆಂಬರ್ 2017ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿರೋಧಿ ಕಾಯ್ದೆಯಡಿ ವಾಲ್ಮೀಕಿ ಸಮುದಾಯ ದೂರು ನೀಡಿತ್ತು. ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಶಿಲ್ಪಾ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮ ಆಧರಿಸಿ ದೂರು ನೀಡಲಾಗಿದ್ದು, ಯಾವುದೂ ಸಾಕ್ಷ್ಯಗಳಿಲ್ಲ. ಯಾವುದೇ ಉದ್ದೇಶಗಳಿಲ್ಲದೇ ನೀಡಿದ ಹೇಳಿಕೆ ಇದಾಗಿದ್ದು, ಯಾರ ಮೇಲೂ ಉದ್ದೇಶಪೂರ್ವಕ ಹೇಳಿಕೆ ಅಲ್ಲ. ಅಲ್ಲದೇ ವಾಲ್ಮೀಕಿ ಸಮುದಾಯವನ್ನು ನಿಂದಿಲ್ಲ ಎಂದು ಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿದೆ.