ಛತ್ತೀಸಗಢದಲ್ಲಿ ಗುಂಡಿನ ಚಕಮಕಿಯಲ್ಲಿ 10 ನಕ್ಸಲರ ಎನ್ ಕೌಂಟರ್
ಭದ್ರತಾ ಸಿಬ್ಬಂದಿಗಳು 10 ಮಾವೊವಾದಿ ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಛತ್ತೀಸಗಢದ ಕೊಂಟಾದಲ್ಲಿ ನಡೆದಿದೆ.
ಬೆಜ್ಜಿ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ ೧೦ ನಕ್ಸಲರನ್ನು ಎನ್ ಕೌಂಟರ್ ಮಾಡಿರುವುದನ್ನು ಪೊಲೀಸ್ ಸೂಪರಿಟೆಂಡೆಂಟ್ ದೃಢಪಡಿಸಿದ್ದಾರೆ.
ಮೂರು ಆಟೊಮೆಟಿಕ್ ಗನ್ ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಡಿಶಾ ಮೂಲಕ ನಕ್ಸಲರು ಛತ್ತೀಸ್ ಗಢ ಪ್ರವೇಶಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ನಕ್ಸಲರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ.
ಛತ್ತೀಸಗಢದಲ್ಲಿ ಕಳೆದ ತಿಂಗಳು 31 ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆ ಬಳಿಕ ನಡೆದ ನಡೆದ ಎರಡನೇ ಅತೀ ದೊಡ್ಡ ಕಾರ್ಯಾಚರಣೆ ಇದಾಗಿದೆ.