ಕಳಪೆ ಕಾಮಗಾರಿ ಪರಿಣಾಮ ಕೊಟ್ಯಾಂತರ ರೂಪಾಯಿ ನಷ್ಟ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು

 

ಯಶವಂತಪುರ : ಸರ್ಕಾರ ಕೋಟ್ಯಾಂತರ ರೂಪಾಯಿಗಳ ಅನುದಾನ ನೀಡಿ ವಾರ್ಡ್ ವ್ಯಾಪ್ತಿಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದರೂ, ಗುತ್ತಿಗೆದಾರರು ಕೈಗೊಂಡ ಕಳಪೆ ಕಾಮಗಾರಿಯ ಪರಿಣಾಮದಿಂದಾಗಿ ಲಕ್ಷಾಂತರ ರೂಪಾಯಿಗಳ ಅನುದಾನ ವ್ಯರ್ಥ ವಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ ಎಂದು ಬಿಬಿಎಂಪಿ ಉಲ್ಲಾಳು ವಾರ್ಡ್ ನ ಕಮಿಟಿ ಸದಸ್ಯೆ ಪ್ರೇಮ ನಾಗಯ್ಯ ತೀವ್ರ ವಾಗ್ದಾಳಿ ನಡೆಸಿದರು.

ಬಿಬಿಎಂಪಿ ಉಲ್ಲಾಳು ವಾರ್ಡ್ ನ ಕಮಿಟಿ ಸಭೆಯಲ್ಲಿ ಅವರು ಮಾತನಾಡಿದರು. ಅಭಿವೃದ್ಧಿ ಹೆಸರಲ್ಲಿ ನಾಗರಿಕರ ತೆರಿಗೆ ಹಣ ಯಾವುದೇ ಕಾರಣಕ್ಕೂ ದುರುಪಯೋಗ ವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸುವ ಮೂಲಕ ಗುಣಮಟ್ಟದ
ಕಾಮಗಾರಿ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ವೇಳೆ ಸಮಿತಿಯ ಎಲ್ಲ ಸದಸ್ಯರು ಅವರಿಗೆ ಧ್ವನಿಗೂಡಿಸಿ ಭ್ರಷ್ಟಾಚಾರ ನಿರ್ಮೂಲನೆಗೆ ಅಧಿಕಾರಿಗಳು ಮುಂದಾಗಬೇಕೆಂದು ತಿಳಿಸಿದರು. ಬಿಬಿಎಂಪಿ ವಾರ್ಡ್ ತಾಂತ್ರಿಕ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ದಯಾನಂದ್ ರವರು ಇದುವರೆಗೂ ಕಮಿಟಿ ಸಭೆಗೆ ಹಾಜರಾಗಿಲ್ಲ ಕಮಿಟಿಯಲ್ಲಿ ತೀರ್ಮಾನ ಗೊಂಡ ಸಮಸ್ಯೆಗಳ ಕುರಿತು ಯಾವುದೇ ಕ್ರಮ ಕೈಗೊಳ್ಳ ದಿರುವುದು ಅವರ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ವಾರ್ಡ್ ಸಭೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆದರೂ ಯಾವುದೇ ಪ್ರಯೋಜನವಾಗಿಲ್ಲ ಸಮಸ್ಯೆ ಸಮಸ್ಯೆ ಯಾಗಿಯೇ ಉಳಿದಿವೆ ಎಂದು ಕಮಿಟಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಕೆರೆ ಅಭಿವೃದ್ಧಿ ಕುರಿತು ಹಲವು ಬಾರಿ ಚರ್ಚೆ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ವಾರ್ಡ್ ಸಮಿತಿ ಸದಸ್ಯರು ತೀವ್ರ ಬೇಸರ ವ್ಯಕ್ತಪಡಿಸಿದರು.

ಕೆರೆ ಅಭಿವೃದ್ಧಿ ಅಭಿವೃದ್ಧಿ ಪ್ರಾಧಿಕಾರ, ಕಂದಾಯ ಇಲಾಖೆ ಬಿಬಿಎಂಪಿ ತಾಂತ್ರಿಕ ಯೋಜನಾ ವಿಭಾಗದ ಅಧಿಕಾರಿಗಳು, ಬಿಡಿಎ, ಬೃಹತ ನೀರುಗಾಲುವೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಸಭೆಗೆ ಹಾಜರಾಗಲು ಮನವಿ ಮಾಡಿದರೂ ಸಭೆಗೆ ಹಾಜರಾಗದೇ ಸಬೂಬುಗಳನ್ನು ಹೇಳುತ್ತಾ ಸಭೆಗೆ ಹಾಜರಾಗದೆ ಕರ್ತವ್ಯಲೋಪ ಎಸಗುತ್ತಿದ್ದಾರೆ ಈ ಕುರಿತು ನೋಡಲ್ ಅಧಿಕಾರಿ ಅವರು ಅಧಿಕಾರಿಗಳ ವಿರುದ್ಧ ನೋಟಿಸ್ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಆಗ್ರಹಿಸಿದರು

ವಾರ್ಡ್ ಕಮಿಟಿ ನೋಡಲ್ ಅಧಿಕಾರಿ ಮುತ್ತುರಾಜು ಮಾತನಾಡಿ ವಾರ್ಡ್ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು ಅಗತ್ಯ ಕ್ರಮ ಕೈಗೊಂಡು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *