ರಾಷ್ಟ್ರೀಯ ಬಾಲ ಪುರಸ್ಕಾರ್ ಪುರಸ್ಕೃತರೊಂದಿಗೆ ಪ್ರಧಾನಿ ನಾಳೆ ಸಂವಾದ

ನವದೆಹಲಿ, ಜ ೨೩(ಉದಯಕಾಲ) ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪುರಸ್ಕೃತರೊಂದಿಗೆ ನಾಳೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಸಚಿವರಾದ ಡಾ. ಮುಂಜಪರಾ ಮಹೇಂದ್ರಭಾಯಿ ಉಪಸ್ಥಿತರಿರುವರು.
೨೦೨೧ ಹಾಗೂ ೨೦೨೨ನೇ ಸಾಲಿನ ಪ್ರಶಸ್ತಿ ಪುರಸ್ಕೃತರಿಗೆ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ, ಡಿಜಿಟಲ್ ಪ್ರಶಸ್ತಿ ಪತ್ರಗಳನ್ನು ಪ್ರದಾನ ಮಾಡಲಿದ್ದಾರೆ. ಇದೇ ಮೊದಲ ಈ ತಂತ್ರಜ್ಞಾನವನ್ನು ಬಳಸಿ, ಪುರಸ್ಕೃತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಈ ವರ್ಷ ದೇಶಾದ್ಯಂತ ೨೯ ಮಕ್ಕಳಿಗೆ ಬಾಲಶಕ್ತಿ ಪುರಸ್ಕಾರ್ ವಿವಿಧ ವರ್ಗಗಳಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಭಾರತದಲ್ಲಿ ವಾಸಿಸುವ, ೫ ವರ್ಷಕ್ಕಿಂತ ಮೇಲ್ಪಟ್ಟ ಮತ್ತು ೧೮ ವರ್ಷ ಮೀರಿರದ ಅಸಾಧಾರಣ ಸಾಮರ್ಥ್ಯಗಳು ಹಾಗೂ ೬ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯೊಂದಿಗೆ ಗುರುತಿಸಲಾಗುತ್ತದೆ, ವಿದ್ವತ್ಪೂರ್ಣ ಸಾಧನೆಗಳು, ಮನ್ನಣೆಗೆ ಅರ್ಹವಾದ ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಸಮಾಜ ಸೇವೆ ಮತ್ತು ಶೌರ್ಯವನ್ನು ಒಳಗೊಂಡಿರುತ್ತದೆ. ಪ್ರತಿ ಪ್ರಶಸ್ತಿಯು ಪದಕ,೧,೦೦,೦೦೦ ರೂ. ನಗದು ಬಹುಮಾನ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ.ಪ್ರಶಸ್ತಿ ಪುರಸ್ಕೃತ ಮಕ್ಕಳು ಪ್ರತಿ ವರ್ಷ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ.

, ,

Leave a Reply

Your email address will not be published. Required fields are marked *