ಬೆಂಗಳೂರಿನ ಐ ಐ ಎಸ್‌ ಸಿ ಸಾಧನೆ ಪ್ರಧಾನಿ ಮೋದಿ ಶ್ಲಾಘನೆ

ಬೆಂಗಳೂರಿನ ಐ ಐ ಎಸ್‌ ಸಿ ಸಾಧನೆ ಪ್ರಧಾನಿ ಮೋದಿ ಶ್ಲಾಘನೆ

ಬೆಂಗಳೂರು, ಜೂನ್‌ 10 ಜಾಗತಿಕ ಉನ್ನತ ಶಿಕ್ಷಣ ಸಲಹಾ ಕ್ವಾಕ್ವೆರಲ್ಲಿ ಸೈಮಂಡ್ಸ್‌ ( ಕ್ಯೂ ಎಸ್)‌ ಸಿದ್ದಪಡಿಸಿದ ಜಾಗತಿಕ ಶ್ರೇಯಾಂಕದಲ್ಲಿ ಸ್ಥಾನ ಪಡೆದಿರುವ ಬೆಂಗಳೂರಿನ ಪ್ರತಿಷ್ಟಿತ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಇಂಡಿಯನ್ ಇನ್ಸ್’ಟಿಟ್ಯೂಟ್ ಆಫ್ ಸೈನ್ಸ್, ಜೊತೆಗೆ ಜಾಗತಿಕ ಶ್ರೇಯಾಂಕದಲ್ಲಿ ಸ್ಥಾನ ಪಡೆದಿರುವ ಐಐಟಿ ಬಾಂಬೆ, ಐಐಟಿ ದೆಹಲಿ ಯನ್ನು ಕಳೆದ ರಾತ್ರಿ ಟ್ವೀಟ್‌ ಮೂಲಕ ಅಭಿನಂದಿಸಿರುವ ಪ್ರಧಾನಿ ಮೋದಿ, ಭಾರತದ ಹೆಚ್ಚಿನ ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆಗಳು ಜಾಗತಿಕ ಉತ್ಕೃಷ್ಟತೆಯನ್ನು ಖಾತರಿಪಡಿಸಲು ಹಾಗೂ ಯುವಕರಲ್ಲಿನ ಭೌದ್ದಿಕ ಶಕ್ತಿ ಬೆಂಬಲಿಸುವ ಪ್ರಯತ್ನದಲ್ಲಿ ಮುಂದೆ ಸಾಗುತ್ತಿವೆ ಎಂದು ಹೇಳಿದ್ದಾರೆ.
ಜಾಗತಿಕ ಉನ್ನತ ಶಿಕ್ಷಣ ಸಲಹಾ ಕ್ವಾಕ್ವೆರಲ್ಲಿ ಸೈಮಂಡ್ಸ್‌ ( ಕ್ಯೂ ಎಸ್)‌ ಪಟ್ಟಿಯಲ್ಲಿ ಜಾಗತಿಕ ವಿಶ್ವವಿದ್ಯಾಲಯದ ಶ್ರೇಯಾಂಕ ಪಡೆದುಕೊಂಡು ಜಗತ್ತಿನ ಅತ್ಯುನ್ನತ ಸಂಶೋಧನಾ ಸಂಸ್ಥೆಯಾಗಿರುವ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದಿಸಿದ್ದು, ಐಐಎಸ್‌ ಸಿ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವಂತೆ ಮಾಡಿದೆ ಎಂದಿದ್ದಾರೆ.
ವಿಶ್ವ ದರ್ಜೆಯ ಶಿಕ್ಷಣ ಕಲ್ಪಿಸುವ ಜೊತೆಗೆ ವಿಜ್ಞಾನ, ತಂತ್ರಜ್ಞಾನ ಹಾಗೂ ಎಂಜಿನಿಯರಿಂಗ್‌ನಲ್ಲಿ ಅತ್ಯಾಧುನಿಕ ಸಂಶೋಧನೆಗೆ ಅನುಕೂಲವಾಗುವಂತೆ ಇಂಡಿಯನ್ ಇನ್ಸ್’ಟಿಟ್ಯೂಟ್ ಆಫ್ ಸೈನ್ಸ್ ಪ್ರತಿಯೊಬ್ಬ ಭಾರತೀಯರನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ಹೇಳಿದ್ದಾರೆ.

,

Leave a Reply

Your email address will not be published. Required fields are marked *