ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಇಂದು ಬದಲಾವಣೆ ಇರುವುದಿಲ್ಲ….!

ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಇಂದು ಬದಲಾವಣೆ ಇರುವುದಿಲ್ಲ….!

ನವದೆಹಲಿ, ಜುಲೈ 13– ದೇಶದಲ್ಲಿ ತೈಲ ಬೆಲೆಗಳು ಜನ ಸಾಮಾನ್ಯರನ್ನು ಇನ್ನಿಲ್ಲದಂತೆ ಕಂಗೆಡೆಸುತ್ತಿವೆ. ಆದರೆ, ನಿರಂತರವಾಗಿ ಏರಿಕೆ ಕಾಣುತ್ತಿರುವ ಪೆಟ್ರೋಲ್, ಡೀಸೆಲ್‌ ಬೆಲೆಗಳಿಗೆ ಇಂದು ತಡೆ ಬಿದ್ದಿದೆ. ಇಂದು ತೈಲ ಬೆಲೆಗಳಲ್ಲಿ ಯಾವುದೇ ಏರಿಕೆ ಇರುವುದಿಲ್ಲ ಎಂದು ತೈಲ ಮಾರಾಟ ಸಂಸ್ಥೆಗಳು ಪ್ರಕಟಿಸಿವೆ.

ಮಂಗಳವಾರ ಬೆಳಗ್ಗೆ ಭಾರತ್ ಪೆಟ್ರೋಲಿಯಂ, ಎಚ್‌ಪಿ, ಇಂಡಿಯನ್ ಆಯಿಲ್ ನಂತಹ ಪ್ರಮುಖ ಪೆಟ್ರೋಲ್ ಬಂಕ್‌ ಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ಮೇ 4 ರಿಂದ ಆರಂಭಗೊಂಡ ಬೆಲೆ ಏರಿಕೆ ಪ್ರವೃತ್ತಿ ಮುಂದುವರಿದುಕೊಂಡೆ ಬಂದಿದೆ ಜುಲೈ ನಲ್ಲಿಯೇ ತಿಂಗಳಲ್ಲಿ ಪೆಟ್ರೋಲ್ ಬೆಲೆ ಏಳು ಬಾರಿ ಹೆಚ್ಚಳಗೊಂಡಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 104ರೂ, ಡೀಸೆಲ್‌ 98 ರೂಪಾಯಿ ಇದೆ. ಹೈದರಾಬಾದ್‌ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 105.15 ರೂ. ಡೀಸೆಲ್ 97.78 ರೂ. ಚೆನ್ನೈನಲ್ಲಿ ಇದು 102 ರೂ., 92 ರೂ., ಮುಂಬೈಯಲ್ಲಿ 107 ರೂ., 97 ರೂ., ದೆಹಲಿಯಲ್ಲಿ ಇದು 101 ರೂ., 89 ರೂ. ಆದರೆ ಒಪೆಕ್ ದೇಶಗಳ ನಿರ್ಧಾರದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

,

Leave a Reply

Your email address will not be published. Required fields are marked *