ಬಿಡುವಿಲ್ಲದೆ ಏರುತ್ತಿರುವ ಪೆಟ್ರೋಲ್ – ಡೀಸೆಲ್ ದರ, ಗ್ರಾಹಕ ಕಂಗಾಲು
ನವದೆಹಲಿ, ಜ 26 ತೈಲ ದರ ಏರಿಕೆಗೆ ಬಿಡುವಿಲ್ಲದಂತಾಗಿ, ಮಂಗಳವಾರ
ಸಹ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್ ಗೆ 35 ಪೈಸೆ ಏರಿಕೆಯಾಗಿ
ಗ್ರಾಹಕರು ದಾರಿ ಕಾಣದೆ ಪರಿತಪಿಸುವಂತಾಗಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಗೆ 86 ರ ಗಡಿಯನ್ನು ದಾಟಿದೆ ಡೀಸೆಲ್ ದರವು ಕಳೆದ ಒಂದು
ವರ್ಷದಲ್ಲಿ ಗರಿಷ್ಠ ಏರಿಕೆ ಕಂಡು ಲೀಟರ್ ಗೆ 76 ಕ್ಕಿಂತಲೂ ಹೆಚ್ಚಿದೆ. ಅಂತಾರಾಷ್ಟ್ರೀಯ
ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್
ಬೆಲೆಯನ್ನು ಪ್ರತಿದಿನ ಪರಿಷ್ಕರಿಸಲಾಗುತ್ತಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 86.05 ಮತ್ತು ಮುಂಬೈನಲ್ಲಿ 92.62 ರೂ.
ಆಗಿದೆ.ಡೀಸೆಲ್ ದರವು ದೆಹಲಿಯಲ್ಲಿ ಲೀಟರ್ ಗೆ 76.23 ಮತ್ತು ಮುಂಬೈನಲ್ಲಿ ಪ್ರತಿ
ಲೀಟರ್ ಗೆ 83.03 ರೂ.ಗೆ ಏರಿಕೆಯಾಗಿದೆ. ಕಳೆದ ವಾರ ತೈಲ ದರ ಏರಿಕೆಗೆ ಸೌದಿಯಲ್ಲಿ
ತೈಲ ಉತ್ಪಾದನೆ ಕಡಿತ ಕಾರಣ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು
ಆರೋಪಿಸಿದ್ದರು.
ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ತೈಲ ಅನ್ವೇಷಕ ಸೌದಿ ಅರೇಬಿಯಾವು ಪ್ರತಿ ದಿನ 1
ಮಿಲಿಯನ್ ಬ್ಯಾರೆಲ್ ಗಳಷ್ಟು ಹೆಚ್ಚುವರಿ ಉತ್ಪಾದನೆ ಕಡಿತ ಮಾಡುವುದಾಗಿ ಪ್ರತಿಜ್ಞೆ
ಮಾಡಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳಾದ ಇಂಡಿಯನ್ ಆಯಿಲ್
ಕಾರ್ಪೊರೇಷನ್ ಲಿಮಿಟೆಡ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್
ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್
ಲಿಮಿಟೆಡ್ (ಎಚ್ ಪಿಸಿಎಲ್) ಜನವರಿ 6ರಂದು ದರ ಪರಿಷ್ಕರಣೆ ಪುನರಾರಂಭಿಸಿ ಒಂದು
ತಿಂಗಳ ನಂತರ ದೈನಂದಿನ ದರ ಪರಿಷ್ಕರಣೆ ಪುನರಾರಂಭಿಸಿವೆ.