ಪೆಟ್ರೋಲ್ – ಡೀಸೆಲ್ ಬೆಲೆ ವಾರದಲ್ಲಿ ಸತತ 4 ನೇ ಭಾರಿಗೆ ಹೆಚ್ಚಳ

 

ನವದೆಹಲಿ, ಜುಲೈ 10  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಾರದಲ್ಲಿ ಸತತ 4 ನೇ ಭಾರಿಗೆ ಏರಿಕೆಯಾಗಿದೆ. ದೇಶದ ಪ್ರಮುಖ ನಗರಗಳಾದ ದೆಹಲಿ , ಕೋಲ್ಕತಾ ಮತ್ತು ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂ. ದಾಟಿವೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 35 ಪೈಸೆ ಹೆಚ್ಚಳವಾಗಿದ್ದರೆ ಡೀಸೆಲ್ ಬೆಲೆ 25 ಪೈಸೆ ಹೆಚ್ಚಳವಾಗಿದೆ.
ಮುಂಬೈಯಲ್ಲಿ ಪೆಟ್ರೋಲ್ ದರ ರ ಪ್ರತಿ ಲೀಟರ್ ಗೆ 106.59 ರೂ. ಕೋಲ್ಕತ್ತಾದಲ್ಲಿ 100.62 ರೂ. ಚೆನ್ನೈನಲ್ಲಿ 101.37 ರೂ. ಬೆಂಗಳೂರಿನಲ್ಲಿ ಲೀಟರ್ ಗೆ 103.93 ರೂ ಏರಿಕೆಯಾಗಿದೆ.

ದೆಹಲಿಯಲ್ಲೂ ಪೆಟ್ರೋಲ್ -ಡೀಸೆಲ್ ಎರಡೂ ಲೀಟರ್ ಗೆ 100 ರೂಗಡಿ ದಾಟಿವೆ ಕೋಲ್ಕತಾದಲ್ಲಿ 92.65 ರೂ. ಚೆನ್ನೈ ಲೀಟರ್ಗೆ 92.15 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ದೇಶದ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ 100 ರೂ.ಗಿಂತಲೂ ಹೆಚ್ಚಾಗಿದೆ. ರಾಜಸ್ಥಾನದ ಗಂಗಾನಗರದಲ್ಲಿ ಪೆಟ್ರೋಲ್ ಗರಿಷ್ಠದ ಲೀಟರ್ ಗೆ 112 ರೂಪಾಯಿಗೆ ತಲುಪಿದೆ.

,

Leave a Reply

Your email address will not be published. Required fields are marked *