ಮುಂಬೈ ಮಹಾನಗರಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 107 ರೂ.

ನವದೆಹಲಿ, ಜುಲೈ 15  ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ, ಜೊತೆಗೆ ಸುದ್ದಿಯಾಗುತ್ತಿದೆ. ಕಳದೆ ಮೂರು ತಿಂಗಳುಗಳಿನಿಂದ ಸತತವಾಗಿ ತೈಲ ಧಾರಣೆ ಹೆಚ್ಚಾಗುತ್ತಿದೆ.
ದೆಹಲಿ ಮತ್ತು ಕೊಲ್ಕತ್ತಾ ನಗರಗಳಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್ 101 ರೂಪಾಯಿಗೆ ಮುಟ್ಟಿದೆ. ದೇಶದ ಕೆಲವು ರಾಜ್ಯಗಳಲ್ಲಿ ಬೆಲೆ ತೈಲ ಬೆಲೆ ಹೆಚ್ಚಳ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದೆ . ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 35 ಪೈಸೆ ಹಾಗೂ ಡೀಸೆಲ್ ಬೆಲೆ 15 ಪೈಸೆ ಹೆಚ್ಚಳವಾಗಿದೆ.
ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರಿಯಲ್ಲಿ ಪೆಟ್ರೋಲ್ ಬೆಲೆ 107 ರೂಪಾಯಿ ಮುಟ್ಟಿದ್ದರೆ ಡೀಸೆಲ್ ಬೆಲೆ 97 ರೂ ಏರಿಕೆಯಾಗಿದೆ.

ಕೊಲ್ಕತ್ತಾ ನಗರದಲ್ಲಿ ಪೆಟ್ರೋಲ್ ಬೆಲೆ 101 ರೂಪಾಯಿಗೆ ಮುಟ್ಟಿದೆ. ಅದೇ ರೀತಿ ಡೀಸೆಲ್ ಬೆಲೆ 95 ರೂ ಗೆ ಮುಟ್ಟಿದೆ. ಪೆಟ್ರೋಲ್ ಮತ್ತು ಡಿಜಲ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿರುತ್ತದೆ ಅಲ್ಲಿನ ಸರಕಾರಗಳು ಸ್ಥಳೀಯ ತೆರಿಗೆಗಳ ಮೇಲೆ ಆಧಾರದ ಮೇಲೆ ವ್ಯತ್ಯಾಸ ವಾಗಲಿದೆ.

,

Leave a Reply

Your email address will not be published. Required fields are marked *