ತಂಡಕ್ಕೆ ಆಯ್ಕೆಯಾಗಲಿಲ್ಲವೆಂದು ಪಾಕ್ ಕ್ರಿಕೆಟಿಗ ಆತ್ಮಹತ್ಯೆ ಯತ್ನ

ಇಸ್ಲಾಮಾಬಾದ್: ಜೂನ್ 23(ಉದಯಕಾಲ ನ್ಯೂಸ್) ದಕ್ಷಿಣ ಸಿಂಧ್ ಪ್ರಾಂತ್ಯದ ಹೈದರಾಬಾದ್‌ನ ಯುವ ಕ್ರಿಕೆಟಿಗನೊಬ್ಬ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಇಂಟರ್-ಸಿಟಿ ಚಾಂಪಿಯನ್‌ಶಿಪ್‌ನಲ್ಲಿ ತನ್ನ ತವರು ತಂಡಕ್ಕೆ ಆಯ್ಕೆಯಾಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವೇಗದ ಬೌಲರ್ ಶೋಯೆಬ್  ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡಿದ್ದು, ಮಂಗಳವಾರ ಅವರ ಕುಟುಂಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ. ಇಂಟರ್-ಸಿಟಿ ಚಾಂಪಿಯನ್‌ಶಿಪ್‌ಗಾಗಿ ಟ್ರಯಲ್ಸ್ ನಲ್ಲಿ ತನ್ನ ತರಬೇತುದಾರರಿಂದ ಆಯ್ಕೆಯಾಗದ ನಂತರ ಶೋಯೆಬ್ ಖಿನ್ನತೆಯಿಂದ ತನ್ನ ಕೋಣೆ ಸೇರಿದ್ದು ಹೊರಗೆ ಬರ್ತಿರಲಿಲ್ಲ ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದರು.

ಅವನ ಕೋಣೆಯ ಬಾತ್ ರೂಂನಲ್ಲಿ ಮಣಿಕಟ್ಟು ಕತ್ತರಿಸಿಕೊಂಡು  ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅವನನ್ನು ಕಂಡು ತಕ್ಷಣವೇ ಆಸ್ಪತ್ರೆಗೆ ಸೇರಿಸಿದೆವು.  ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದರು.

ಫೆಬ್ರವರಿ 2018 ರಲ್ಲಿ  ಕರಾಚಿಯ ಅಂಡರ್-19 ಕ್ರಿಕೆಟಿಗ ಮುಹಮ್ಮದ್ ಜರಿಯಾಬ್ ನಗರದ ಅಂಡರ್-19 ತಂಡದಿಂದ ಕೈಬಿಡಲ್ಪಟ್ಟ ನಂತರ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು.

Leave a Reply

Your email address will not be published. Required fields are marked *