ರಾಷ್ಟ್ರಪತಿ ಭೇಟಿಗೆ ಪ್ರತಿಪಕ್ಷ ನಾಯಕರ ಸಜ್ಜು

ರಾಷ್ಟ್ರಪತಿ ಭೇಟಿಗೆ ಪ್ರತಿಪಕ್ಷ ನಾಯಕರ ಸಜ್ಜು

ನವದೆಹಲಿ, ಸೆ 23 : ಕೃಷಿ ಮಸೂದೆ ಅಂಗೀಕಾರ ಮತ್ತು ಸಂಸತ್ ಸದಸ್ಯರ ಅಮಾನತ್ತಿನ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳ ನಾಯಕರು ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಲಿದ್ದಾರೆ.

ಕೋವಿಡ್ ನಿಮಯಾವಳಿಗಳ ಪ್ರಕಾರ, ಕೇವಲ ಐವರು ನಾಯಕರಿಗೆ ಮಾತ್ರ ರಾಷ್ಟ್ರಪತಿಗಳನ್ನು ಭೇಟಿಯಾಗಲು ಅವಕಾಶ ದೊರೆತಿದೆ. ರಾಷ್ಟ್ರಪತಿ ಭೇಟಿಗೆ ಅವಕಾಶ ನೀಡುವಂತೆ ಈ ಹಿಂದೆ ಪ್ರತಿಪಕ್ಷಗಳು ಕೋರಿದ್ದವು.ಈ ನಡುವೆ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಗುಲಾಂ ನಬಿ ಆಜಾದ್ ನಿವಾಸದಲ್ಲಿ ವಿವಿಧ ಪಕ್ಷಗಳ ನಾಯಕರು ಸಭೆ ನಡೆಸಿದ್ದಾರೆ.

ಕೃಷಿ ಮಸೂದೆ ಮತ್ತು 8 ಸದಸ್ಯರ ಅಮಾನತನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಕೆಳಮನೆಯ ಕಲಾಪವನ್ನೂ ಬಹಿಷ್ಕರಿಸಿವೆ.

Leave a Reply

Your email address will not be published. Required fields are marked *