ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಆಕ್ಸಿಜನ್ ಬ್ಯಾಂಕ್ ಉದ್ಘಾಟನೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಆಕ್ಸಿಜನ್ ಬ್ಯಾಂಕ್ ಉದ್ಘಾಟನೆ

ಬಳ್ಳಾರಿ,ಜೂ.10  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಆಕ್ಸಿಜನ್ ಬ್ಯಾಂಕ್ ಅನ್ನು ರೆಡ್‍ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಡಾ.ಎಸ್.ಜೆ.ವಿ.ಮಹಿಪಾಲ್ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನಗರದಲ್ಲಿ ಕೋವಿಡ್ ದೃಢಪಟ್ಟ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಉಸಿರಾಟದ ತೊಂದರೆ ಎದುರಾದರೇ, ಅವರು ವೈದ್ಯರ ಸಲಹೆ ಮೇರೆಗೆ ಅವರಿಗೆ ನಮ್ಮ ರೆಡ್ ಕ್ರಾಸ್ ವತಿಯಿಂದ ಆಕ್ಸಿಜನ್ ಕಾನಸನ್‍ಟ್ರೇಟರ್ ಗಳನ್ನು ಉಪಯೋಗಿಸಬಹುದು. 10 ದಿನಗಳ ಕಾಲ ಆಕ್ಸಿಜನ್ ಕಾನಸನ್‍ಟ್ರೇಟರ್ ಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.

ಈ ಆಕ್ಸಿಜನ್ ಕಾನಸನ್‍ಟ್ರೇಟರ್ ಪಡೆಯಲು ರೆಡ್‍ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರಾದ ವಿಷ್ಣು ಕುಮಾರ್ ಅವರ ದೂ.ಸಂ 9902713944 ಗೆ ಸಂಪರ್ಕಿಸಬಹುದು ಎಂದರು.

ಈ ವೇಳೆ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಖಜಾಂಚಿ ಪೊಲಾ ರಾಧಾಕೃಷ್ಣ, ಸಂಸ್ಥೆಯ ಕಾರ್ಯದರ್ಶಿಎಂ.ಎ.ಷಕೀಬ್ ಇತರರು ಇದ್ದರು.

 

,

Leave a Reply

Your email address will not be published. Required fields are marked *