ಅಕ್ಟೋಬರ್​ 28 – ನವೆಂಬರ್ 7 ಬಿಹಾರ ವಿಧಾನಸಭೆ ಚುನಾವಣೆಗೆ ಡೇಟ್​ ಫಿಕ್ಸ್​.

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ರಾಜ್ಯದ 243 ಕ್ಷೇತ್ರಗಳಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
ಅಕ್ಟೋಬರ್​ 28 ರಂದು ಮೊದಲ ಹಂತ, ನವೆಂಬರ್​ 3 ರಂದು ಎರಡನೇ ಹಂತ ಹಾಗೂ ನವೆಂಬರ್ 7 ರಂದು 3ನೇ ಹಂತದ ಚುನಾವಣೆ ನಡೆಯಲಿದೆ. ನ.10 ರಂದು ಮತಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಫಲಿತಾಂಶ ಘೋಷಣೆಯಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಮಾಹಿತಿ ನೀಡಿದ್ದಾರೆ.
ಕೋವಿಡ್ ಮಾರ್ಗಸೂಚಿಗಳ ಎಲೆಕ್ಷನ್​ ನಡೆಯಬೇಕಿದ್ದು, ಈ ಬಾರಿ ಮತದಾನದ ಅವಧಿಯನ್ನು ಒಂದು ಗಂಟೆಯ ಕಾಲ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ಬದಲು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ ಎಂದು ಅರೋರಾ ತಿಳಿಸಿದ್ದಾರೆ.
ಮಹಾಮಾರಿ ಕೊರೊ​ನಾ ಭೀತಿಯ ನಡುವೆ​ ದೇಶದಲ್ಲಿ ನಡೆಯಲಿರುವ ರಾಜ್ಯವೊಂದರ ಮೊದಲ ವಿಧಾನಸಭೆ ಚುನಾವಣೆ ಇದಾಗಿದೆ.

Leave a Reply

Your email address will not be published. Required fields are marked *