ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ‘ಮಾನಿನಿ’ ಎಂದು ಹೆಸರಿಡಬೇಕು: ಇಂದ್ರಜಿತ್ ಲಂಕೇಶ್

ಮೈಸೂರು, ಆ.27  ದೆಹಲಿಯ ‘ನಿರ್ಭಯ’ ಪ್ರಕರಣದ ನಂತರದಲ್ಲಿ ಮೈಸೂರಿನಲ್ಲಿ ನಡೆದ ಈ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ‘ಮಾನಿನಿ’ ಎಂದು ಹೆಸರಿಡಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತ್ಯಾಚಾರ ಸಂತ್ರಸ್ತೆಗೆ ರಾಜ್ಯ ಸರ್ಕಾರ ನಿರ್ಭಯ ಯೋಜನೆ ಅಡಿಯಲ್ಲಿ ಹೆಚ್ಚಿನ ಪರಿಹಾರ ಕೊಡಬೇಕು. ಸಂಪೂರ್ಣವಾಗಿ ಪೊಲೀಸರನ್ನು ಹೊಣೆ ಮಾಡುವುದು ಸರಿಯಲ್ಲ. ಇದರಲ್ಲಿ ರಾಜಕಾರಣಿಗಳ ಹಸ್ತಕ್ಷೇಪವು ಇದೆ. ರಾಜಕಾರಣಿಗಳು ತಾಲಿಬಾನ್‌ಗಳಿಗೆ ಹೋಲಿಸುತ್ತಿದ್ದಾರೆ. ಮತ್ತೆ ಕೆಲವರು ಯುವಕ-ಯುವತಿ ಹೋಗಿದ್ದೆ ತಪ್ಪು ಎನ್ನುತ್ತಿದ್ದಾರೆ. ರಾಜಕಾರಣಿಗಳು ಏನು ಮಾತಾಡುತ್ತಿದ್ದಾರೆ? ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಎಲ್ಲರು ಗಮನಿಸುತ್ತಿದ್ದಾರೆ ಎಂದರು.
ಅತ್ಯಾಚಾರ ಮಾಡಿದವರಿಗೆ ಯಾವ ಶಿಕ್ಷೆ ಎಂದು ಬಸ್ ನಿಲ್ದಾಣಗಳಲ್ಲಿ ಹಾಕಬೇಕಿದೆ. ರಾಜಕಾರಣಿಗಳು ನಾನೇ ಈ ನಿಲ್ದಾಣ ಮಾಡಿಸಿದ್ದು ಎಂದು ಹಾಕುತ್ತಾರೆ. ಆದರೆ, ಇಂದು ಅತ್ಯಾಚಾರ ಕೇಸ್​​​ಗೆ ಯಾವ ಶಿಕ್ಷೆ ಎಂದು ಬೋರ್ಡ್ ಹಾಕಬೇಕಿದೆ‌ ಎಂದರು.

, ,

Leave a Reply

Your email address will not be published. Required fields are marked *