ಸಿದ್ದರಾಮಯ್ಯನವರೇ, ನನ್ನ ಜೀವನ ತೆರೆದ ಪುಸ್ತಕವಿದ್ದಂತೆ: ಸಚಿವ ಹೆಬ್ಬಾರ್

ಬೆಂಗಳೂರು,ಮೇ.13,ಉದಯಕಾಲ ನ್ಯೂಸ್: ಸಿದ್ದರಾಮಯ್ಯನವರೇ, ನನ್ನ ಜೀವನ ತೆರೆದ ಪುಸ್ತಕವಿದ್ದಂತೆ, ನನ್ನ ನಡೆ ನುಡಿಯನ್ನು ಕೆಲವು ಕಾಲ ಹತ್ತಿರದಿಂದ ನೋಡಿದ ನಿಮ್ಮ ಈ ಕೀಳಭಿರುಚಿಯ ಹೇಳಿಕೆ ನಿಜಕ್ಕೂ ಖೇದಕರ ಎಂದು ಕಾರ್ಮಿ ಸಚಿವ ಶಿವರಾಂ ಹೆಬ್ಬಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರಿಂದು ಈ ಸಂಬಂಧ ಟ್ವೀಟ್‌ ಮಾಡಿದ್ದಾರೆ. ನಮ್ಮ ಸರ್ಕಾರ & ಕಾರ್ಮಿಕ ಇಲಾಖೆ, ಕೋವಿಡ್ ಮೊದಲ ಲಾಕಡೌನ್ ನಲ್ಲಿ ಸಂಕಷ್ಟದಲ್ಲಿದ್ದ ಎಲ್ಲ ವರ್ಗದ ಕಾರ್ಮಿಕರಿಗೆ ಸಹಾಯವಾಣಿ, ಕಾರ್ಮಿಕ ಸಂಘ-ಸಂಸ್ಥೆಗಳು ಹಾಗೂ ಎಲ್ಲ ಸರಕಾರಿ ಇಲಾಖೆಗಳ ಸಹಕಾರದೊಂದಿಗೆ ಸಿದ್ದ ಆಹಾರ ಪೊಟ್ಟಣಗಳನ್ನು ಒದಗಿಸುವ ದಕ್ಷ, ಪ್ರಾಮಾಣಿಕ ಕೆಲಸ ಮಾಡಿದೆ & ಹಲವು ರಾಜ್ಯಗಳು ನಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿವೆ ಎಂದಿದ್ದಾರೆ.

ಪೂರ್ಣ ಮಾಹಿತಿ ಪಡೆಯದೇ, ಈ ರೀತಿ ಹತಾಶೆಯಿಂದ ಗಾಳಿಯಲ್ಲಿ ಗುಂಡು ಹೊಡೆಯೋ ಪ್ರಯತ್ನ ನಿಮಗೆ ಶೋಭ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಲಸಿಗರಿಗೆ ಆಹಾರ ಕಿಟ್‌ಗಳ ವಿತರಣೆಯಲ್ಲೂ ಹಗರಣಗಳನ್ನು ನಾಯಕರು ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಮನಃಸ್ಥಿತಿ ಹೀಗಿದೆ. ಮಂತ್ರಿ ಶಿವರಾಮ ಹೆಬ್ಬಾರ್ ಅವರು ಉಳಿದ ಭ್ರಷ್ಟ ನಾಯಕರೊಂದಿಗೆ ಹಣ ಸಂಪಾದಿಸುವುದು  ಸುಲಭವಾಗುವಂತೆ ಬಿಜೆಪಿಗೆ ಹೋದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದರು.

 

Leave a Reply

Your email address will not be published. Required fields are marked *