ದುಷ್ಕರ್ಮಿಗಳಿಂದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ

ದುಷ್ಕರ್ಮಿಗಳಿಂದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಾಜಿ ಕಾರ್ಪೇರೇಟರ್ ರೇಖಾ ಕದೀರೇಶ್ ಮೇಲೆ ದುಷ್ಕರ್ಮಿಗಳು ಮಾರಕಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದೀರೇಶ್ ಅವರನ್ನು ಛಲವಾದಿ ಪಾಳ್ಯದ ಪ್ಲವರ್ ಗಾರ್ಡನ್ ಬಳಿ ದುಷ್ಕರ್ಮಿಗಳು ಮನೆಯಿಂದ ಹೊರಗೆ ಕರೆದು ದುಷ್ಕರ್ಮಿಗಳು ಮಾರಕಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಗಾಯಾಳು ರೇಖಾ ಕದೀರೇಶ್ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ರೇಖಾ ಜೊತೆಗಿದ್ದ ಶೋಭನ್ ಗ್ಯಾಂಗ್ ಜೊತೆ ಗುರಿತಿಸಿಕೊಂಡಿದ್ದ ಪೀಟರ್ ಹತ್ಯೆ ಮಾಡಿರೊ ವ್ಯಕ್ತಿ ಎಂದು ಶಂಕಿಸಲಾಗಿದೆ. 2018ರಲ್ಲಿ ರೇಖಾರ ಪತಿ ಕದಿರೇಶ್ ರನ್ನು ಶೋಭನ್ ಗ್ಯಾಂಗ್ ಹತ್ಯೆಗೈದಿತ್ತು.

,

Leave a Reply

Your email address will not be published. Required fields are marked *