ಮುಂಬೈ ಷೇರು ವಿನಿಮಯ ಕೇಂದ್ರ :ಸೆನ್ಸೆಕ್ಸ್ 400 ಅಂಕ ಚೇತರಿಕೆ

ಮುಂಬೈ, ಸೆ 25  –ಎಲ್ಲ ವಲಯಗಳ ಷೇರುಗಳ ಖರೀದಿ ಭರಾಟೆಯ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‍ಇ)ದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ 417 ಅಂಕ ಕುಸಿದು 36,970.63 ಕ್ಕೆ ಏರಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 134.20 ಅಂಕ ಏರಿಕೆಯೊಂದಿಗೆ 10,939.75 ಕ್ಕೆ ತಲುಪಿದೆ.
ಸೆನ್ಸೆಕ್ಸ್, ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 37,027.99 ಮತ್ತು 36,822.04ರಲ್ಲಿತ್ತು.
ನಿಫ್ಟಿ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ ಕ್ರಮವಾಗಿ 10,945.80 ಮತ್ತು 10,881.55ರಲ್ಲಿತ್ತು.
ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 28 ಏರಿಕೆ ದಾಖಲಿಸಿದರೆ 2 ಕಂಪೆನಿಗಳ ಷೇರುಗಳು ಕುಸಿದಿವೆ.
ಪ್ರಮುಖ ಷೇರುಗಳ ಪೈಕಿ ಟಿಸಿಎಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಎಂ ಅಂಡ್‍ ಎಂ, ಇಂಡಸ್ಇಂಡ್ ಬ್ಯಾಂಕ್ , ಮಾರುತಿ ಸುಜುಕಿ ಏರಿಕೆ ದಾಖಲಿಸಿವೆ.

ಉಳಿದಂತೆ, ಕೊಟಕ್ ಬ್ಯಾಂಕ್, ಟೈಟಾನ್ ನಷ್ಟ ಕಂಡಿವೆ.

Leave a Reply

Your email address will not be published. Required fields are marked *