ರಾಜ್ಯಗಳು, ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ 2.88 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸ್‍ ಲಭ್ಯ

ರಾಜ್ಯಗಳು, ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ 2.88 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸ್‍ ಲಭ್ಯ

ನವದೆಹಲಿ, ಜುಲೈ 21  ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ 2.88 ಕೋಟಿಗೂ ಹೆಚ್ಚು ಬಳಕೆಯಾಗದ ಕೋವಿಡ್ ಲಸಿಕೆ ಡೋಸ್‍ ಲಭ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
53,38,210 ಡೋಸ್‍ ಗಳು ನೀಡಿಕೆ ಹಂತದಲ್ಲಿವೆ ಎಂದು ಸಚಿವಾಲಯ ತಿಳಿಸಿದೆ.

ಈವರೆಗೆ ಕೇಂದ್ರ ಸರ್ಕಾರ, ರಾಜ್ಯಗಳಿಗೆ 43.25 ಕೋಟಿ (43,25,17,330) ಡೋಸ್‍ ಗಳನ್ನು ವಿತರಿಸಿದೆ. ಇದರಲ್ಲಿ, ಲಭ್ಯವಿರುವ ಮಾಹಿತಿಯಂತೆ ವ್ಯರ್ಥವಾದ ಡೋಸ್‍ ಸೇರಿದಂತೆ ಒಟ್ಟು 40,36,44,231 ಡೋಸ್‍ ಗಳು ಬಳಕೆಯಾಗಿವೆ. ಈವರೆಗೆ, 41,54,72,455 ಜನರಿಗೆ ಕೋವಿಡ್-19 ಲಸಿಕೆಗಳನ್ನು ನೀಡಲಾಗಿದ್ದು, ಕಳೆದ 24 ಗಂಟೆಗಳಲ್ಲಿ 34,25,446 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಸಾರ್ವತ್ರಿಕ ಕೋವಿಡ್ ಲಸಿಕೆ ನೀಡಿಕೆಯ ಮೊದಲ ಹಂತ ಜೂನ್ 21 ರಂದು ಆರಂಭವಾಗಿತ್ತು. ಅಂದಿನಿಂದ, ಹೆಚ್ಚಿನ ಲಸಿಕೆಗಳ ಲಭ್ಯತೆಯ ಮೂಲಕ ಲಸಿಕೆ ನೀಡಿಕೆ ಅಭಿಯಾನ ಚುರುಕುಗೊಂಡಿದೆ.

,

Leave a Reply

Your email address will not be published. Required fields are marked *