ಬೆಲೆಯೇರಿಕೆ, ಬಡತನ, ಹಣದುಬ್ಬರದಲ್ಲಿ ಮೋದಿ ಗರಿಷ್ಠ ಸಾಧನೆ – ಕಾಂಗ್ರೆಸ್ ಟೀಕೆ

ಬೆಂಗಳೂರು: ಮೇ 13 (ಉದಯಕಾಲ ನ್ಯೂಸ್) ಬೆಲೆಯೇರಿಕೆ, ಬಡತನ, ಹಣದುಬ್ಬರದಲ್ಲಿ ಮೋದಿ ಸರಕಾರ ಗರಿಷ್ಠ ಸಾಧನೆ ಮಾಡಿದೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ. ಈ ಕುರಿತು ದಿನೇಶ್ ಗುಂಡೂರಾವ್ ಸರಣಿ ಟೀಕೆ ಮಾಡಿದ್ದು,  ಮೋದಿಯವರ ಆಡಳಿತದಲ್ಲಿ ಹಣದುಬ್ಬರ 7.79 ಕ್ಕೆ ಏರಿ 8 ವರ್ಷದಲ್ಲಿ ಗರಿಷ್ಠ ಸಾಧನೆ ಮಾಡಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 101ನೇ ಸ್ಥಾನ. ಬಡತನ ಸೂಚ್ಯಂಕದಲ್ಲಿ 66 ನೇ ಸ್ಥಾನ. ನಿರುದ್ಯೋಗದ ದರ 7.83% ಏರಿಕೆ. ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ.‌ ಪೆಟ್ರೋಲ್ 113,ಡೀಸೆಲ್ 96. ಅಡುಗೆ ಎಣ್ಣೆ ₹85 ಗಳಿಂದ ₹205. ಇದಪ್ಪಾ ಅಚ್ಛೆದಿನ್.

8 ವರ್ಷಗಳ ಹಿಂದೆ ಸಿಲಿಂಡರ್ ಬೆಲೆ 400 ಇದ್ದಾಗ ‘ದುಬಾರಿ ಕಾಂಗ್ರೆಸ್ ಸಾಕು-ಜನಪರ BJP ಬೇಕು’ ಎಂದು BJPಯವರು ಬೀದಿ ಬೀದಿಯಲ್ಲಿ ಬ್ಯಾನರ್ ಹಾಕಿದ್ದರು. ಈಗ ಸಿಲಿಂಡರ್ ₹1000 ದಾಟಿದೆ. ಅಕ್ಕಿ,ಗೋದಿ ಹಿಟ್ಟು,ಸಾಬೂನು, ಟೂಥ್‌ಪೇಸ್ಟ್ ಜನರ ಕೈಗೆಟುಕದಂತಾಗಿದೆ. ಈಗ BJPಯವರಿಗೆ ‘ದುಬಾರಿ BJP ಸಾಕು’ ಎಂದು ಬ್ಯಾನರ್ ಹಾಕಿಸುವ ಧಮ್ ಇದೆಯೆ.?

ಆರ್ಥಿಕ ಶಿಸ್ತಿಲ್ಲದ ಮೋದಿಯವರ ಆಡಳಿತದಿಂದ‌ ದೇಶದ ಸಾಮಾನ್ಯ ವರ್ಗ ಬದುಕಲು ಹೋರಾಟ ನಡೆಸಬೇಕಾಗಿದೆ. ಮೋದಿಯವರು ದೇಶದ ನೈಜ ಸಮಸ್ಯೆಗಳನ್ನು ಮರೆಮಾಚಲು ಧರ್ಮ‌ ದೇವರು ಎಂಬ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.‌ ಆದರೆ ಧರ್ಮ ಜನರ ಹೊಟ್ಟೆ ತುಂಬಿಸುವುದಿಲ್ಲ.‌ ಜನರ ಹೊಟ್ಟೆಗೆ‌ ಗತಿಯಿಲ್ಲದ ಸ್ಥಿತಿ ಬಂದರೆ‌ ಶ್ರೀಲಂಕಾದ ದುರಂತ ಭಾರತದಲ್ಲೂ ಆಗಬಹುದು ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *