ಸಚಿವೆ ಶಶಿಕಲಾ ಜೊಲ್ಲೆ ಮೊಟ್ಟೆ ಟೆಂಡರ್ ಗೋಲ್ಮಾಲ್; ಜೊಲ್ಲೆ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್- ರಾಜೀನಾಮೆಗೆ ಒತ್ತಾಯ

ಸಚಿವೆ ಶಶಿಕಲಾ ಜೊಲ್ಲೆ ಮೊಟ್ಟೆ ಟೆಂಡರ್ ಗೋಲ್ಮಾಲ್; ಜೊಲ್ಲೆ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್- ರಾಜೀನಾಮೆಗೆ ಒತ್ತಾಯ

ಬೆಂಗಳೂರು,ಜು.24 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಅಂಗನವಾಡಿ ಮೂಲಕ ಗರ್ಭಿಣಿಯರು, ಅಪೌಷ್ಟಿಕ ಮಕ್ಕಳು ಮತ್ತು ಬಾಣಂತಿಯರಿಗೆ ಮೊಟ್ಟೆ ವಿತರಿಸಲು ಸರ್ಕಾರ ಇಲಾಖೆ ವತಿಯಿಂದ ನೀಡಿದ್ದ ಟೆಂಡರ್‌ನಲ್ಲಿ ಭ್ರಷ್ಟಾಚಾರ ಅಕ್ರಮವೆಸಗಿರುವ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದು ಕಾರ್ಯಾಚರಣೆ ನಡೆಸಿದೆ.
ಸಚಿವೆ ಜೊಲ್ಲೆ ಮಾತೃಪೂರ್ಣ ಯೋಜನೆಯಡಿಯಲ್ಲಿ ಮೊಟ್ಟೆ ವಿತರಿಸುವ ಟೆಂಡರ್ ಹಂಚಿಕೆಯಲ್ಲಿ ಲಂಚದ ಆಮಿಷವೊಡ್ಡಿದ ಅಂಶ ಈ ಕುಟುಕು ಕಾರ್ಯಾಚರಣೆಯಲ್ಲಿ ಹೊರದಿದ್ದಿದೆ.

ಶಶಿಕಲಾ ಜೊಲ್ಲೆ ಅವರು ಮಾಡಿದ್ದಾರೆ ಎನ್ನಲಾದ ಹಗರಣದ ವಿರುದ್ಧ ಚಾಟಿ ಬೀಸಲು ರಾಜ್ಯ ಕಾಂಗ್ರೆಸ್ ಸಿದ್ಧವಾಗಿದ್ದು ಜೊಲ್ಲೆ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರ ಲಂಚ ಪ್ರಕರಣ ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ಚಾಲ್ತಿಯಲ್ಲಿರುವ ಭ್ರಷ್ಟಾಚಾರದ ಪ್ರಮಾಣವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.
ಮಕ್ಕಳಲ್ಲಿ ಪೌಷ್ಠಿಕಾಂಶವನ್ನು ಹೆಚ್ಚಿಸುವ ಮತ್ತು ಅಪೌಷ್ಠಿಕತೆಯ ವಿರುದ್ಧ ಹೋರಾಡುವ ಬದಲು ಅದಕ್ಕಾಗಿ ಮೀಸಲಿರುವ ಹಣವನ್ನೇ ನಿರ್ಲಜ್ಜೆಯಿಂದ ಲೂಟಿ ಮಾಡಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಶಶಿಕಲಾ ಜೊಲ್ಲೆ ರಾಜೀನಾಮೆಗೆ ಆಗ್ರಹಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಶಶಿಕಲಾ ಜೊಲ್ಲೆ ಮತ್ತು ಅವಳನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಬೇಕು. ಮಕ್ಕಳು ಮತ್ತು ಗರ್ಭಿಣಿ ತಾಯಂದಿರಿಗೆ ಮೊಟ್ಟೆಗಳನ್ನು ಒದಗಿಸಲು ಲಂಚವನ್ನು ಕೋರುವುದು ಹೆಚ್ಚು ಸೂಕ್ಷ್ಮವಲ್ಲ. ಬಿಜೆಪಿಯಲ್ಲಿ ಇಂತಹ ದುಃಖದ ಸ್ಥಿತಿ. ಈ ಎಳೆಯನ್ನು ತೋರಿಸಿ ಸ ಸ್ಟಿಂಗ್ ಕಾರ್ಯಾಚರಣೆ ಮಹಿಳಾ ಮತ್ತು ಮಕ್ಕಳ ಸಚಿವ ಶಶಿಕಲಾ ಜೊಲ್ಲೆ ಬಿಜೆಪಿ 4 ಕರ್ನಾಟಕ ಪಕ್ಷದ ಭ್ರಷ್ಟಾಚಾರದ ಕಾಯಿಲೆಯನ್ನು ಪುನರುಚ್ಚರಿಸಿದ್ದಾರೆ. “ಮೈ ಖೌಂಗಾ, ಥುಮ್ ಭಿ ಖಾವೋ ಇದು ಬಿಜೆಪಿಯ ಮೋಟ್ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

,

Leave a Reply

Your email address will not be published. Required fields are marked *