ಬೆಂಗಳೂರು; ಸಾರ್ವಜನಿಕ ಜಿಮ್ ಉದ್ಘಾಟಸಿದ ಸಚಿವ ಕೆ.ಗೊಪಾಲಯ್ಯ

 

ಬೆಂಗಳೂರು : ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 75 ಶಂಕರ ಮಠ ದಲ್ಲಿನ ಕಾವೇರಿನಗರದ ತರಕಾರಿ ಮಾರುಕಟ್ಟೆ ಹತ್ತಿರ ಇರುವ ಉದ್ಯಾನವನದಲ್ಲಿ ಸ್ಥಳೀಯ ಪಾಲಿಕೆ ಸದಸ್ಯರಾದ ಎಂ ಶಿವರಾಜು ಅವರ ಅನುದಾನದಲ್ಲಿ ಬಿಬಿಎಂಪಿ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಸಾರ್ವಜನಿಕ ಜಿಮ್ ಅನ್ನು ಇಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ ಗೋಪಾಲಯ್ಯ ಅವರು ಉದ್ಘಾಟಿಸಿದರು.


ನಂತರ ಮಾತನಾಡಿದ ಸಚಿವರು ದೈನಂದಿನ ಜೀವನದಲ್ಲಿ ಎಲ್ಲರೂ ಆರೋಗ್ಯ ವಾಗಿರಲು ಯೋಗ ಪ್ರಾಣಾಯಾಮ ಧ್ಯಾನ ಹಾಗೂ ವ್ಯಾಯಾಮ ದಂತಹ ಚಟುವಟಿಕೆ ಕೈಗೊಳ್ಳಬೇಕು ಆಗಲೇ ನಮ್ಮ ದೇಹ ಮತ್ತು ಮನಸ್ಸು ಉಲ್ಲಾಸಿತವಾಗಿ ಇರುತ್ತದೆ. ಎಲ್ಲರೂ ಸ್ವಾಸ್ಥ ಸ್ವಚ್ಛ ಪರಿಸರ ಸಂರಕ್ಷಣೆ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಬಿಬಿಎಂಪಿ ವತಿಯಿಂದ ಈ ಜಿಮ್ ನಿರ್ಮಿಸಿದ್ದು ಎಲ್ಲರೂ ಇದರ ಸದಪಯೋಗವನ್ನು ಪಡೆದುಕೊಂಡು ಸದೃಢ ದೇಹ , ಆರೋಗ್ಯದಿಂದ ದಿನವನ್ನು ಕಳೆಯುವಂತೆ ಸಚಿವರು ತಿಳಿಸಿದರು.
ನಂತರ ಮಾತನಾಡಿದ ಪಾಲಿಕೆ ಸದಸ್ಯರಾದ ಎಂ ಶಿವರಾಜು ಅವರು ತಮ್ಮ ಅಧಿಕಾರ ಅವಧಿಯಲ್ಲಿ ಎಲ್ಲ ಕಡೆಗಳಲ್ಲೂ ಇದೇ ರೀತಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು,ಸಾರ್ವಜನಿಕರು ಇದರ ಪ್ರಯೋಜನ ಪಡೆದು ಉತ್ತಮ ಆರೋಗ್ಯ ಮತ್ತು ಸಂತೋಷ ನೆಮ್ಮದಿಯಿಂದ ಜೀವನ ನಡೆಸುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು. ಸಮಾರಂಭದಲ್ಲಿ ಬೆಂಗಳೂರು ಉತ್ತರ ಬಿಜೆಪಿ ಉಪಾಧ್ಯಕ್ಷ ರಾದ ಎನ್ ಜಯರಾಮ್,ಬಿಜೆಪಿ ಮಂಡಲ ಅಧ್ಯಕ್ಷ ರಾದ ರಾಘವೇಂದ್ರ ಶೆಟ್ಟಿ, ಶಂಕರ ಮಠ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ರಾದ ಸತೀಶ್ ಗೌಡ, ಅವಿನ್ ಆರಾಧ್ಯ, ಜಯಸಿಂಹ, ಸುರೇಶ್,ಆರ್ ಮಂಜುನಾಥ್,ನಿಸರ್ಗ ಜಗದೀಶ್,ಬಿಬಿಎಂಪಿ ಹಿರಿಯ ಅಧಿಕಾರಿಗಳಾದ ತಿಮ್ಮಾರಸು ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *