ಕವಿ, ಚಿಂತಕ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಡಾ: ಸಿದ್ದಲಿಂಗಯ್ಯ ಅವರ ಸ್ಮರಣೆ

ಕವಿ, ಚಿಂತಕ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಡಾ: ಸಿದ್ದಲಿಂಗಯ್ಯ ಅವರ ಸ್ಮರಣೆ

ರಾಜರಾಜೇಶ್ವರಿನಗರ : ಬುದ್ದ,ಬಸವ,ಅಂಬೇಡ್ಕರ್‌ರವರ ವಿಚಾರಧಾರೆಯನ್ನು ಜೀವನ ಕ್ರಮದಲ್ಲಿ ಅಳವಡಿಸಿಕೊಂಡು ಇತರರಿಗೂ ಅವರ ವಿಚಾರಧಾರೆಗಳನ್ನು ಮನವರಿಕೆ ಮಾಡಿಕೊಟ್ಟು ಜಾಗೃತಿ ಮೂಡಿಸಿದ ಧೀಮಂತ ವ್ಯಕ್ತಿ ಡಾ.ಸಿದ್ದಲಿಂಗಯ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದರು.ನಾಡೋಜ ಡಾ.ಸಿದ್ದಲಿಂಗಯ್ಯ ಸ್ಮಾರಕ ಪ್ರತಿಷ್ಠಾನ ವತಿಯಿಂದ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಆಯೋಜಿಸಿದ್ದ ಡಾ.ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಾವಿರಾರು ಕಾವ್ಯಗಳನ್ನು ರಚಿಸಿ ದಲಿತ ಚಳುವಳಿಗೆ ವೇಗ ಮತ್ತು ಸ್ಪರ್ಶ ನೀಡಿದರು. ಕಥೆ,ಕಾವ್ಯ,ನಾಟಕಗಳಂತಹ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚಿಸಿ ಛಾಪು ಮೂಡಿಸಿ ಸಾಧನೆ ಮಾಡಿ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದರು ಎಂದರು. ಎರಡು ಭಾರಿ ವಿಧಾನ ಪರಿಷತ್ ಸದಸ್ಯರಾಗಿ  ಸದನದಲ್ಲಿ ನಾಡಿನ ಹಿತಕ್ಕಾಗಿ ಸಮಾಜದ ಅವ್ಯವಸ್ಥೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟು  ಸಮಾಜ ಪ್ರಜ್ಞೆ ಯನ್ನು ಜಾಗೃತಗೊಳಿಸುವ ಮೂಲಕ ನ್ಯಾಯ ಒದಗಿಸಿದ್ದಾರೆ ಇಂತಹ ವ್ಯಕ್ತಿತ್ವ ಹೊಂದಿದ್ದ ಸಿದ್ದಲಿಂಗಯ್ಯ ರವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.ಡಾ.ಸಿದ್ದಲಿAಗಯ್ಯ ರವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೂ ಕೊಂಡ್ಯೊಯಲು ಏನು ಕಾರ್ಯ ಮಾಡಬೇಕು ಎಂಬುದನ್ನು ಹಿರಿಯರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬಂದು ಶಾಶ್ವತವಾಗಿ ಚಿರಸ್ಮರಣೆ ಮಾಡಲು  ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಮಾತನಾಡಿ ಅಸ್ಪೃಶ್ಯತೆಯ ನೋವುಂಡು ತನ್ನ ಕಾವ್ಯದ ಮೂಲಕಆಕಾಶದೆತ್ತರಕ್ಕೆ ಬೆಳೆದ ಶ್ರೇಷ್ಠ ವ್ಯಕ್ತಿ ದಲಿತ ಸಮಾಜದಲ್ಲಿ ಹುಟ್ಟಿದ್ದರೂಸಮಾಜದ ಎಲ್ಲಾ ವರ್ಗದ ಜನರಿಗೆ ಸಾಹಿತ್ಯದ ಮೂಲಕ  ಕಣ್ಣು ತರೆಸಿದರು.ಹುಟ್ಟು ಸಾವು ಅನಿವಾರ್ಯ ಆದರೇ ಅವರ ಸಮಾಜ ಮುಖಿ ಚಿಂತನೆ, ಜನಪರ ಕಾಳಜಿ ,ತತ್ವ,ಸಿದ್ದಾಂತ, ಆದರ್ಶ ಮತ್ತು ವಿಚಾರಧಾರೆಗಳ ಹೆಜ್ಜೆ ಗುರುತು ಶಾಶ್ವತವಾಗಿ ಉಳಿಯಲಿದೆ ಎಂದರು.  ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ ಅಂತಃಕರಣವನ್ನು ಅಕ್ಷರವನ್ನಾಗಿಸಿ ಸಮಾಜ ಸುಧಾರಣೆಗೆ ಪ್ರಯತ್ನಸಿ ಯುವ ಸಮುದಾಯಕ್ಕೆ ಸ್ಪೂರ್ತಿ ತುಂಬಿ ಚಳುವಳಿಗೆ ಜೀವ ತುಂಬಿದ ಧೀಮಂತ ನಾಯಕ ಎಂದು ಬಣ್ಣಿಸಿದರು. ಡಾ.ಸಿದ್ದಲಿಂಗಯ್ಯ ಉತ್ತಮ ಒಡನಾಡಿಯಾಗಿ ನಮ್ಮ ಕುಟುಂಬ ಸದಸ್ಯರಲ್ಲಿ ಒಬ್ಬರಾಗಿದ್ದರು ಎಂದರು. ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು,ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರ ಶಾಸಕ ಮುನಿರತ್ನ,

ನಾಡೋಜ ಡಾ.ಸಿದ್ದಲಿಂಗಯ್ಯ ಸ್ಮಾರಕ ಪ್ರತಿಷ್ಠಾನ ಅಧ್ಯಕ್ಷೆö ಡಾ.ಮಾನಸ ಸಿದ್ದಲಿಂಗಯ್ಯ, ರಮಾಸಿದ್ದಲಿಂಗಯ್ಯ,ಡಿ.ಶಿವಶAಕರ್ ಮುಂತಾದವರು ಉಪಸ್ಥಿತರಿದ್ದರು.ಡಾ.ಸಿದ್ದಲಿಂಗಯ್ಯ ರವರ ಸಮಾಧಿಗೆ ಪುಷ್ಪ ನಮನ,ಬುದ್ಧ ವಂದನೆ ಮತ್ತು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಇದೇ ವೇಳೆ ಡಾ.ಸಿದ್ದಲಿಂಗಯ್ಯ ರವರ ಸಮಗ್ರ ಕಾವ್ಯ ಬೋಧಿವೃಕ್ಷದ ಕೆಳಗೆ ಮತ್ತು ಕೆಂಪು ಸೂರ್ಯ ಕೃತಿಗಳನ್ನು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದರು.

, ,

Leave a Reply

Your email address will not be published. Required fields are marked *