ನಿಷೇಧವಿದ್ದರೂ ಮಾಂಸ ಮಾರಾಟ ಮಾಡುತ್ತಿದ್ದ ವ್ಯಾಪರಸ್ತನ ಬಂಧನ

ನಿಷೇಧವಿದ್ದರೂ ಮಾಂಸ ಮಾರಾಟ ಮಾಡುತ್ತಿದ್ದ ವ್ಯಾಪರಸ್ತನ ಬಂಧನ

ಗದಗ: ನಗರದಲ್ಲಿ ವೀಕೆಂಡ್ ಲಾಕ್ ಡೌನ್ ಹಾಗೂ ಭಗವಾನ್ ಮಹಾವೀರ ಜಯಂತಿ ನಿಮಿತ್ತ ಜಿಲ್ಲಾಡಳಿತ ಜಾನುವಾರು ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಿದ್ದರೂ ಬೆಳ್ಳಂಬೆಳಿಗ್ಗೆ ಯೇ ಮಾಂಸದ ಅಂಗಡಿಗಳನ್ನು ತೆರೆದು ವ್ಯಾಪಾರ ಜೋರಾಗಿಯೇ ನೆಡೆಸಿದ್ದರು.
ವಿಷಯ ತಿಳಿದ ಕೂಡಲೇ ಮಾಂಸದಂಗಡಿ ವ್ಯಾಪರಸ್ತರನ್ನು ಪೊಲೀಸರು ಬಂಧಿಸಿರುವ ಘಟನೆ ನಗರದ ಜವುಳ ಗಲ್ಲಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ನಿಷೇಧವಿದ್ದರೂ ಮಾಂಸದಂಗಡಿ ತೆರೆದಿದ್ದರ ಬಗ್ಗೆ ಮಾಹಿತಿ ಆಧರಿಸಿ ನಗರಸಭೆ ಸಿಬ್ಬಂದಿ ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿದ್ದಾರೆ. ಈ ವೇಳೆ ಅಂದಾಜು ಆರು ಜನರನ್ನು ಮಾಂಸದ ಸಹಿತ ವಶಕ್ಕೆ ಪಡೆದು, ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಕೋಳಿ, ಮಾಂಸವನ್ನೋತ್ತೊಯ್ದ ಅಧಿಕಾರಿಗಳು..!: ದಾಳಿ ವೇಳೆ ತೆರೆದಿದ್ದ ಮಾಂಸದಂಗಡಿಗಳಿಂದ ಮಾಂಸ ಹಾಗೂ ಕೆಲವು ಕೋಳಿಗಳನ್ನು ನಗರಸಭೆ ಸಿಬ್ಬಂದಿ ಹೊತ್ತೊಯ್ದರು ಎಂದು ಪ್ರತ್ಯಕ್ಷ್ಯದರ್ಶಿಯೊಬ್ಬರು ಹೇಳಿದ್ದಾರೆ. ಸರ್ಕಾರ ವಾರಾಂತ್ಯ ಕರ್ಫ್ಯೂ ದಿನವೂ ಬೆಳಿಗ್ಗೆ 10 ಗಂಟೆಯವೆರೆಗ ಮಾರಾಟಕ್ಕೆ ಅನುಮತಿಸಿದೆ. ನಿಷೇಧಿಸಿದ ದಿನ ಮಾಂಸದಂಗಡಿ ತೆರೆಯುವ ಅಗತ್ಯವೇನಿತ್ತು ಎಂದು ಸ್ಥಳದಲ್ಲಿದ್ದ ಜನ ಮಾತನಾಡಿಕೊಳ್ಳುತ್ತಿದ್ದರು.

Leave a Reply

Your email address will not be published. Required fields are marked *