ಮಧುಗಿರಿ : ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ, ದೂರು ದಾಖಲು

ಮಧುಗಿರಿ : ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ, ದೂರು ದಾಖಲು

ಮಧುಗಿರಿ :ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಗೆ ಸೇರಿದ ಕಂತಾನಹಳ್ಳಿ ಗ್ರಾಮದ ಬಳಿಯ 16 ವರ್ಷದ ಅಪ್ರಾಪ್ತ ಯುವತಿ ಮೇಲೆ ದೊಡ್ಡದಾಳವಟ್ಟದ ಉಗ್ರಪ್ಪ ( 22 ) ಎನ್ನುವವ ಅತ್ಯಾಚಾರ ಎಸಗಿದ್ದಾನೆಂದು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ .
ಯುವತಿ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಸ್ವತಃ ದೂರು ದಾಖಲಿಸಿರುವ ಪ್ರಕಾರ , ಆರೋಪಿಯು ಯುವತಿಯೊಂದಿಗೆ ತಮಾಷೆ ಮಾಡುವ ಸೋಗಿನಲ್ಲಿ ಕೆನ್ನೆ , ತಲೆ ಸವರಿದ್ದಾನೆ . ಆಗ ಯುವತಿ ಆರೋಪಿಯ ಕೆನ್ನೆಗೆ ಹೊಡೆದಿದ್ದಾಳೆ . ಈ ಕಾರಣಕ್ಕೆ ಆರೋಪಿ ಯುವತಿಯನ್ನು ಬಲವಂತವಾಗಿ ಆಂಧ್ರದ ಅನಂತಪುರಂ ಜಿಲ್ಲೆಯ ಪೆನುಗೊಂಡ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿ , ಹದಿನೈದು ದಿನಗಳ ಕಾಲ ಮನೆಯಲ್ಲಿಯೇ ಕೂಡಿ ಹಾಕಿಕೊಂಡು ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದಾನೆ . ನಂತರ ಮಡಕಶಿರಾ ಪಟ್ಟಣಕ್ಕೆ ಕರೆತಂದು , ಅಲ್ಲಿಯೆ ಬಿಟ್ಟು ಪರಾರಿಯಾಗಿದ್ದಾನೆ . ಹೀಗೆಂದು ಜೂನ್ 08 ರಂದು ಯುವತಿ ಮಿಡಿಗೇಶಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ . ಸದರಿ ದೂರಿನನ್ವಯ ಸಿಪಿಐ ಎಂ.ಎಸ್ . ಸರ್ದಾರ್ , ಠಾಣಾಧಿಕಾರಿ ನವೀನ್ ಕುಮಾರ್ ಹಾಗೂ ಸಿಬ್ಬಂದಿ ಉಗ್ರಪ್ಪನನ್ನು ಜೂನ್ 9 ರಂದು ಬಂಧಿಸಿದ್ದಾರೆ . ಪೋಕ್ಸೋಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು , ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು , ನ್ಯಾಯಾಲಯವು ಅರೋಪಿಗೆ ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಎಟಿಎಂ ಹಣ ಕದಿಯಲು ವಿಫಲ ಯತ್ನ :- ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಬಸ್ ನಿಲ್ದಾಣದ ಅಂಗಡಿ ಮಳಿಗೆ ಯೊಂದರಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಇಂಡಿಯಾ ಎಟಿಎಂ ತರೆಯಲಾಗಿತ್ತು . ಜೂನ್ 08 ರ ರಾತ್ರಿ ಎಟಿಎಂ ಬಾಗಿಲು ಒಡೆದು ಹಣ ದೋಚಲು ಕಳ್ಳರು , ಸೇಫ್ಟಿ ಲಾಕರ್ ಓಪನ್ ಮಾಡಲಾಗದೆ ವಿಫಲರಾಗಿದ್ದಾರೆ .
ಈ ಬಗ್ಗೆ ಎಟಿಎಂನ ಜವಾಬ್ದಾರಿ ಹೊತ್ತಿರುವ ತುಮಕೂರಿನ ಮಂಜುನಾಥ್ ಹಣ ಕಳುವಾಗಿಲ್ಲ ಘಟನೆ ಬಗ್ಗೆ ಮುಂಬೈನಲ್ಲಿ ರುವ ಇಂಡಿಯಾ ಎಟಿಎಂ ಪ್ರಮುಖ ಶಾಖೆಗೆ ಮಾಹಿತಿ ನೀಡುವುದಾಗಿ ತಿಳಿಸಿದರು . ಸಿಸಿ ಕ್ಯಾಮರಾ ಅಳವಡಿಸಲಾಗಿದೆಯಾದರೂ , ಸೈರನ್ ಅಳವಡಿಸಿಲ್ಲ ಮತ್ತು ಸೆಕ್ಯೂರಿಟಿಯನ್ನು ನೇಮಿಸಿಲ್ಲವೆಂದು ಗ್ರಾಹಕರು ದೂರಿದ್ದಾರೆ. .

,

Leave a Reply

Your email address will not be published. Required fields are marked *