ಲೋಕಸಭಾ, ರಾಜ್ಯಸಭಾ ಟಿವಿ ಸಂಸದ್ ಟಿವಿಯಾಗಿ ವಿಲೀನ

ಲೋಕಸಭಾ, ರಾಜ್ಯಸಭಾ ಟಿವಿ ಸಂಸದ್ ಟಿವಿಯಾಗಿ ವಿಲೀನ


ನವದೆಹಲಿ, ಮಾ 3  ಸಂಸತ್ತಿನ ಉಭಯ ಸದನಗಳ ಕಲಾಪ ನೇರ ಪ್ರಸಾರ ಮಾಡುವ ರಾಜ್ಯಸಭಾ ಟಿವಿ ಮತ್ತು ಲೋಕಸಭಾ ಟಿವಿಯನ್ನು ವಿಲೀನ ಮಾಡಿ, ಹೊಸದಾಗಿ ಸಂಸದ್ ಟಿ.ವಿಯಾಗಿ ಪರಿವರ್ತಿಸಲಾಗಿದೆ.

ಸಂಸದ್ ಟಿವಿಯ ಎರಡು ಚಾನೆಲ್ ಗಳು ಇರಲಿದ್ದು, ಒಂದರಲ್ಲಿ ಲೋಕಸಭೆ ಮತ್ತೊಂದರಲ್ಲಿ ರಾಜ್ಯಸಭೆ ಕಲಾಪ ಪ್ರಸಾರ ಮಾಡಲಾಗುತ್ತದೆ. ಸಂಸತ್ ಅಧಿವೇಶನ ಇಲ್ಲದ ಸಮಯದಲ್ಲಿ ಎರಡು ಚಾನೆಲ್ ಗಳು ಸಾಮಾನ್ಯ ವಿಷಯವನ್ನು ಪ್ರಸಾರ ಮಾಡಲಿವೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಮತ್ತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ತಿರ್ಮಾನದ ಮೇರೆಗೆ ಆಡಳಿತಾತ್ಮಕ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ಆದೇಶ ಕೂಡಲೇ ಜಾರಿಗೆಯಾಗುವಂತೆ ಸೂಚಿಸಲಾಗಿದೆ.
ನಿವೃತ್ತ ಐಎಎಸ್ ಅಧಿಕಾರಿ ರವಿ ಕಪೂರ್ ಅವರನ್ನ ಸಂಸದ್ ಟಿವಿ ಸಿಇಒ ಆಗಿ ನೇಮಕ ಮಾಡಲಾಗಿದೆ. ಇವರ ಸೇವೆ ಒಂದು ವರ್ಷ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ.

,

Leave a Reply

Your email address will not be published. Required fields are marked *