ಲಾಕ್ ಡೌನ್ ಉಲ್ಲಂಘನೆ: 655 ವಾಹನ ಜಪ್ತಿ

ಲಾಕ್ ಡೌನ್ ಉಲ್ಲಂಘನೆ: 655 ವಾಹನ ಜಪ್ತಿ

ಬೆಂಗಳೂರು, ಜೂ.10  ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ
ಲಾಕ್ ಡೌನ್ ಜಾರಿಯಾಗಿದ್ದರೂ ನಿಯಮಮೀರಿ ರಸ್ತೆಗಳಿದಿದ್ದ ವಾಹನಗಳನ್ನು ನಗರ ಪೊಲೀಸರು ಬುಧವಾರ ಜಪ್ತಿ ಮಾಡಿಕೊಂಡಿದ್ದಾರೆ.

ಕಳೆದ 20 ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ 655 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

566 ದ್ವಿಚಕ್ರ ವಾಹನ, 32 ತ್ರಿಚಕ್ರ ವಾಹನ, 57 ನಾಲ್ಕು ಚಕ್ರದ ವಾಹನ ಸೇರಿ ಒಟ್ಟು 655 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಅಲ್ಲದೇ, ಈ ವೇಳೆ ಎನ್‌ಡಿಎಂಎ ಕಾಯ್ದೆಯಡಿ 8 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

,

Leave a Reply

Your email address will not be published. Required fields are marked *