ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಹುಕ್ಕಾಬಾರ್ ಆರಂಭಿಸಲಿ: ಸಿ.ಟಿ.ರವಿ ತಿರುಗೇಟು

ಬೆಂಗಳೂರು,ಆ.12 ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಿಸಲೆತ್ನಿಸುತ್ತಿರುವ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮತ್ತೆ ತಮ್ಮ ಬೇಡಿಕೆಯನ್ನು ಪುಷ್ಠೀಕರಿಸಿದ್ದು, ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು “ನೆಹರು ಹುಕ್ಕಾಬಾರ್” ಆರಂಭಿಸಲಿ ಎಂದು ಸವಾಲೆಸೆದಿದ್ದಾರೆ.
ಇತ್ತೀಚೆಗೆ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಿಸಿ “ಅನ್ನಪೂರ್ಣೇಶ್ವರಿ” ಎಂದು ಮರುನಾಮಕರಣ ಮಾಡುವಂತೆ ಸಿ.ಟಿ.ರವಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ಪಡಿಸಿದ್ದರು. ಕಾಂಗ್ರೆಸ್ ನಾಯಕರ ಆಕ್ಷೇಪಕ್ಕೆ ತಿರುಗೇಟು ನೀಡಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ನವರು ಬೇಕಾದರೆ ತಮ್ಮ ಕಚೇರಿಯಲ್ಲಿ “ಇಂದಿರಾ ಕ್ಯಾಂಟೀನ್’ತೆರೆಯಲಿ. ಅದಕ್ಕೂ ಹೆಚ್ಚೆಂದರೆ ಅವರು ಬೇಕಾದರೆ “ನೆಹರು ಹುಕ್ಕಾ ಬಾರ್” ಎಂಬ ಹೆಸರಿನಲ್ಲಿಯೂ ಕ್ಯಾಂಟೀನ್ ತೆರೆಯಲಿ.ಸರ್ಕಾರ ಇಂದಿರಾ ಕ್ಯಾಂಟೀನ್ ಅನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮಾಡಲಿ ಎಂದರು.
ನಮ್ಮ ರಾಜಕೀಯ ವಿರೋಧಿಗಳು ಹಳೆಯ ಗ್ರಾಮಾಫೋನ್ ಪ್ಲೇಟನ್ನು ತಿರುಗಸುತ್ತಲೇ ಇರುತ್ತಾರೆ.ಅದರಲ್ಲಿ ಸಿದ್ದರಾಮಯ್ಯ ಸಹ ಒಬ್ಬರಾಗಿದ್ದು,ಸಿದ್ದರಾಮಯ್ಯ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗಬೇಕು. ಬಿಜೆಪಿಗರು ಅಂಬೇಡ್ಕರ್ ವಿರೋಧಿಯಲ್ಲ.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷವೇ ಎರಡು ಬಾರಿ ಸೋಲಿಸಿದ್ದು ಎನ್ನುವುದನ್ನು ಸಿದ್ದರಾಮಯ್ಯ ಮರೆತಂತಿದೆ.ಕಾಂಗ್ರೆಸ್ ನವರು ತಮ್ಮ ಸಾಫ್ಟ್ ವೇರ್ ಅನ್ನು ಅಪ್ಡೇಟ್ ಮಾಡಿಕೊಳ್ಳಲಿ ಎಂದು ಸಿ.ಟಿ.ರವಿ ಸೂಚ್ಯವಾಗಿ ಹೇಳಿದರು.
ಭಾರತ ಕೇಂದ್ರೀತ ವಿದೇಶಾಂಗ ನೀತಿ ಯುಗ ಆರಂಭ ಆಗಿದೆ.ಮೋದಿಯವರು ಪ್ರಧಾನಿ ಆದ ಬಳಿಕ ಭಾರತ ಕೇಂದ್ರೀತ ವಿದೇಶಾಂಗ ನೀತಿಗೆ ಒತ್ತು ನೀಡಿದ್ದಾರೆ.ಸಂಸತ್ತಿನಲ್ಲಿ ಕಾಂಗ್ರೆಸ್ ವಿಪಕ್ಷಗಳ ಅಸಹಾಕಾರದ ನಡುವೆಯೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ.671 ಒಬಿಸಿ ಸಮುದಾಯಗಳು ನ್ಯಾಯ ಪಡೆಯೋಕೆ ಸಾಧ್ಯವಾಗಲಿದೆ.ಬಿಜೆಪಿಗೆ ಮೀಸಲಾತಿ ಬದ್ಧತೆ,ಸಾಮಾಜಿಕ ನ್ಯಾಯ ಬಿಜೆಪಿಯ ಬದ್ಧತೆಯಿದ್ದು ಅದಕ್ಕೆ ಪೂರಕವಾಗಿ ನಮ್ಮ ಸರ್ಕಾರ ನಡೆದುಕೊಳ್ಳುತ್ತಿದೆ. ಕಳೆದ ಏಳು ವರ್ಷಗಳಿಂದ ಹಿಂದುಳಿದ ವರ್ಗದವರೇ ಪ್ರಧಾನಿಯಾಗಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯದ ಅಬ್ದುಲ್ ಕಲಾಂರನ್ನು ಎರಡನೇ ಅವಧಿಗೆ ರಾಷ್ಟ್ರಪತಿ ಮಾಡಲೇ ಇಲ್ಲ.ಮೋದಿ ಸಂಪುಟದಲ್ಲಿ 27 ಒಬಿಸಿ ವರ್ಗಕ್ಕೆ ಸಚಿವ ಸ್ಥಾನ ಸಿಕ್ಕಿದೆ. ಅದರೊಂದಿಗೆ ನ್ಯಾಯ ಮತ್ತು ಪ್ರಾದೇಶಿಕ ನ್ಯಾಯವೂ ಸಿಕ್ಕಿದೆ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದಕ್ಕೆ ಕಿಡಿಕಾರಿರುವ ಬಿಜೆಪಿ ಶಾಸಕ ಪ್ರೀತಮ್ ಗೌಡಗೆ ಬುದ್ಧಿವಾದ ಹೇಳಿದ ಸಿ.ಟಿ.ರವಿ, ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡಬಾರದು .ಸಿಎಂ ಬೊಮ್ಮಾಯಿ ಹಿರಿಯರಾದ ದೇವೇಗೌಡರ ಆಶೀರ್ವಾದ ಪಡೆದಿದ್ದು ತಪ್ಪಲ್ಲ.ಬಿಜೆಪಿ ಹಿತಾಸಕ್ತಿ ಬಿಟ್ಟು ಯಾರಾದರೂ ವ್ಯವಹರಿಸಿದರೆ ನಾವು ಮಾತನಾಡುತ್ತೇವೆ. ಸೌಜನ್ಯದ ಭೇಟಿಗೆ ತಪ್ಪು ಹುಡುಕಬಾರದುನಮ್ಮ ಪಕ್ಷದ ಕಾರ್ಯಕರ್ತರ ಹಿತಾಸಕ್ತಿಗೆ ವಿರುದ್ಧವಾಗಿ ಯಾರಾದರೂ ನಡೆದರೂ ನಾವು ಕಾರ್ಯಕರ್ತರ ಪರ ಮಾತನಾಡುತ್ತೇವೆ ಎಂದು ಸಿ.ಟಿ.ರವಿ ಹೇಳದರು.

,

Leave a Reply

Your email address will not be published. Required fields are marked *