ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಂಖ ಘೋಷ್‌ ಕೊರೊನಾಗೆ ಬಲಿ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಂಖ ಘೋಷ್‌ ಕೊರೊನಾಗೆ ಬಲಿ

ಕೋಲ್ಕತಾ, ಏ 21 ಪ್ರಖ್ಯಾತ ಬಂಗಾಳಿ ಬರಹಗಾರ, ಜ್ಞಾನಪೀಠ ಪುರಸ್ಕೃತ ಸಾಹಿತಿ ಶಂಖ ಘೋಷ್ ಕೋವಿಡ್ ಸೋಂಕಿನಿಂದ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ.
ಕಳೆದ ಕೆಲ ದಿನಗಳಿಂದ ತಮ್ಮ ನಿವಾಸದಲ್ಲಿ ಸ್ವಯಂ ಐಸೋಲೇಷನ್‌ ನಲ್ಲಿದ್ದ ಘೋಷ್ ಅವರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
89 ವರ್ಷದ ಘೋಷ್ ಈ ತಿಂಗಳ 14 ರಂದು ಕೊರೊನಾ ಸೋಂಕಿಗೆ ಒಳಗಾಗಿದ್ದರು. ವೈದ್ಯರ ಸೂಚನೆಯಂತೆ ಸ್ವಯಂ ಐಸೋಲೇಷನ್‌ ಗೆ ಒಳಗಾಗಿದ್ದರು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಹಲವು ಆರೋಗ್ಯ ಸಮಸ್ಯೆಗಳಿಂದ ಅಸ್ವಸ್ಥರಾಗಿದ್ದ ಘೋಷ್ ಕೆಲ ತಿಂಗಳ ಹಿಂದೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. 1932ರ ಫೆಬ್ರವರಿ 6ರಂದು ಚಂದಾಪುರದಲ್ಲಿ ಘೋಷ್ ಜನಿಸಿದ್ದರು. ಪ್ರಸ್ತುತ ಈ ಸ್ಥಳ ಬಾಂಗ್ಲಾದೇಶದಲ್ಲಿದೆ.
“ಆದಿಮ್ ಲಾಟಾ-ಗುಲ್ಮೋಮ್” ಹಾಗೂ “ಮುರ್ಖಾ ಬ್ಯಾರೊ, ಸಾಮಾಜಿಕ್ ನಾಯ್” ಸೇರಿದಂತೆ ಹಲವು ಕೃತಿಗಳು ಘೋಷ್‌ ಅವರಿಗೆ ವಿಶೇಷ ಮನ್ನಣೆ ತಂದುಕೊಟ್ಟಿದ್ದವು. ಸಾಮಾಜಿಕ ಹಾಗೂ ರಾಜಕೀಯ ಅಂಶಗಳ ಕಟು ಟೀಕಾಕಾರರಾಗಿದ್ದ ಘೋಷ್‌ ಅವರಿಗೆ 2011 ರಲ್ಲಿ ಪದ್ಮಭೂಷಣ, 2016 ರಲ್ಲಿ ಜ್ಞಾನಪೀಠ ಪ್ರಶಸ್ತಿ ಗೆ ಭಾಜನರಾಗಿದ್ದರು. 1977 ರಲ್ಲಿ ತಮ್ಮ “ಬಾಬರ್ ಪ್ರಥನಾ” ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.ಅವರ ಕೃತಿಗಳು ಹಿಂದಿ ಹಾಗೂ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿವೆ.

,

Leave a Reply

Your email address will not be published. Required fields are marked *