ಸಚಿವ ಅಶೋಕ್ ಅವರಿಂದ ಕಾಟಾಚಾರದ ಪರಿಶೀಲನೆ: ಅಜಯ್ ಸಿಂಗ್

ಸಚಿವ ಅಶೋಕ್ ಅವರಿಂದ ಕಾಟಾಚಾರದ ಪರಿಶೀಲನೆ: ಅಜಯ್ ಸಿಂಗ್

ಕಲಬುರಗಿ, ಅ.16 ಕಂದಾಯ ಸಚಿವ ಆರ್. ಅಶೋಕ್ ಅವರು ಜೇವರ್ಗಿ
ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶಗಳ ಜನರ ಸಮಸ್ಯೆಗಳನ್ನೂ ಆಲಿಸಲಿಲ್ಲ, ಕೇವಲ
ಕಾಟಾಚಾರಕ್ಕೆ ಪರಿಶೀಲನೆ ನಡೆಸಿದ್ದಾರೆ ಎಂದು ಜೇವರ್ಗಿ ಶಾಸಕ ಅಜಯ್ ಸಿಂಗ್
ಆರೋಪಿಸಿದ್ದಾರೆ.
ಶುಕ್ರವಾರ ಸಚಿವ ಆರ್ ಅಶೋಕ ಅವರು ಜೇವರ್ಗಿ ತಾಲೂಕಿನಲ್ಲಿ ಪ್ರವಾಹಕ್ಕೊಳಗಾದ
ಪ್ರದೇಶವನ್ನು ವೀಕ್ಷಿಸಿದರು.
ಈ ಹಿನ್ನೆಲೆಯಲ್ಲಿ ಶಾಸಕ ಅಜಯ್ ಸಿಂಗ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ,
ಜೇವರ್ಗಿ ತಾಲ್ಲೂಕಿನ ಇಂತಹ ಪ್ರದೇಶಗಳಿಗೆ ಭೇಟಿ ನೀಡುವಂತೆ ನಾವು ಸಚಿವರಿಗೆ ಮನವಿ

ಮಾಡಿದ್ದೆವು. ಆದರೆ, ಅವರು ಅಂತಹ‌ ಪ್ರದೇಶಗಳನ್ನು ಸಮರ್ಪಕವಾಗಿ ವೀಕ್ಷಿಸಲಿಲ್ಲ ಎಂದು
ಆರೋಪಿಸಿದರು.
ಸಚಿವರು ಪರಿಹಾರ ಘೋಷಿಸಿ, ಅಲ್ಲಿಯ ಜನರಲ್ಲಿ ಧೈರ್ಯ ತುಂಬಬೇಕಿತ್ತು. ಆದರೆ,
ಅದ್ಯಾವ ಕೆಲಸವನ್ನು ಸಚಿವರು ಮಾಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಶೋಕ್ ಅವರು ಜೇವರ್ಗಿ ತಾಲೂಕಿನ ಸರಡಗಿ ಕೋನಾ ಹಿಪ್ಪರಗಿ ಬ್ರಿಡ್ಜ್ ಹಾಗೂ
ಸುತ್ತಮುತ್ತಲಿನ ಬೆಳೆ ಹಾನಿಯನ್ನು ವೀಕ್ಷಿಸಿದ್ದರು.

Leave a Reply

Your email address will not be published. Required fields are marked *