ಜಲಿಯನ್ ವಾಲಾಬಾಗ್ ಹೊಸ ಸಮುಚ್ಚಯ ನಾಳೆ ಲೋಕಾರ್ಪಣೆ

ಅಮೃತಸರ, ಆಗಸ್ಟ್ 27  ಜಗತ್ತಿನ ರಕ್ತಪಾತ ಅಧ್ಯಾಯಗಳಲ್ಲಿ ಒಂದಾದ ಜಲಿಯನ್ ವಾಲಾಬಾಗ್ ನಲ್ಲಿ ಪುನಶ್ಚೇತನಗೊಂಡ ಹೊಸ ಸಮುಚ್ಚಯವನ್ನು ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ದೇಶ ಸ್ವಾತಂತ್ರ್ಯಗಳಿಸಿ 75ನೇ ವರ್ಷದ ಆಚರಣೆಯಲ್ಲಿ ತೊಡಗಿರುವಾಗಲೇ ಜಲಿಯನ್ ವಾಲಾಬಾಗ್ ಹೊಸ ಸಮುಚ್ಚಯ ಲೋಕಾರ್ಪಣೆ ಗೊತ್ತಿರುವುದು ದೇಶಪ್ರೇಮಿಗಳಿಗೆ ಸಂತಸದ ವಿಚಾರವಾಗಿದೆ. ಸಮುಚ್ಚಯಕ್ಕೆ ಹೊಸ ಮೆರಗು ನೀಡಲಾಗಿದೆ. ಕೊಳಗಳನ್ನು ಆಧುನಿಕ ರೀತಿಯಲ್ಲಿ ಪುನಶ್ಚೇತನಗೊಳಿಸಲಾಗಿದೆ.
ದೇಶದ ಸ್ವಾತಂತ್ರ್ಯ ಪಡೆಯುವಲ್ಲಿನ ವಿರೋಚಕ ಕಥೆಗಳನ್ನು ಸಾರುವ, ಬಿಂಬಿಸುವ ವರ್ಣಚಿತ್ರಗಳನ್ನು ಹೊಸದಾಗಿ ವಿನ್ಯಾಸ ಮಾಡಲಾಗಿದೆ. ಪ್ರವಾಸಿಗರ ಆಕರ್ಷಣೆಗಾಗಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ. ಅಜಾದಿ ಕಾ ಅಮೃತ ಮಹೋತ್ಸವ ಸಡಗರದಲ್ಲಿ ದೇಶದ 75 ಸ್ಥಳಗಳಲ್ಲಿ ಸ್ವಾತಂತ್ರದ ಸಂಭ್ರಮ ನೆನಪಿಸುವ ಆಚರಣೆಗಳನ್ನು 2023 ರ ಆಗಸ್ಟ್ ವರೆಗೂ ಹಮ್ಮಿಕೊಳ್ಳಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಜಲಿಯನ್ ವಾಲಾಬಾಗ್ ಸ್ಮಾರಕ ಟ್ರಸ್ಟಿನ ಅಧ್ಯಕ್ಷರಾಗಿದ್ದಾರೆ. ನಾಳೆ ವರ್ಚುವಲ್ ವೇದಿಕೆ ಮೂಲಕ ಹೊಸ ಸಮುಚ್ಚಯವನ್ನು ದೇಶಕ್ಕೆ ಅರ್ಪಿಸಲಿದ್ದಾರೆ. ಹೊಸ ಸಮುಚ್ಚಯ ಕಳೆದ ಎಪ್ರಿಲ್ ತಿಂಗಳಲ್ಲಿ ಲೋಕಾರ್ಪಣೆ ಆಗಬೇಕಾಗಿತ್ತು ಆದರೆ ಕೊರೋನ ಹೆಚ್ಚಳದ ಕಾರಣದಿಂದಾಗಿ ಮುಂದೂಡಲಾಗಿತ್ತು.

,

Leave a Reply

Your email address will not be published. Required fields are marked *