ಮಂತ್ರಿ ಸ್ಥಾನ ಹೋದರೆ ಗೂಟ ಹೋದಂತೆ: ಸಚಿವ ಈಶ್ವರಪ್ಪ

ಶಿವಮೊಗ್ಗ,ಜು.19 ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಸಚಿವ ಸ್ಥಾನದಿಂದ ಕೆ.ಎಸ್.ಈಶ್ವರಪ್ಪರನ್ನು ಹಿಂಪಡೆಯುವ ಬಗೆಗಿನ ಆಡಿಯೋ ಬಹಿರಂಗ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ,ಮಂತ್ರಿಗಿರಿ ಹೋದರೆ ಗೂಟ ಹೋದಂತೆ ಎಂದಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ,ಮಂತ್ರಿ ಸ್ಥಾನ ಹೋದರೆ ಹೋಗಲಿ.ನಾನೇನೂ ಗೂಟ ಹೊಡೆದುಕೊಂಡು ಕೂರಲು ಬಂದಿಲ್ಲ.ಮಂತ್ರಿ ಸ್ಥಾನ ಇಲ್ಲವಾದರೆ ಪಕ್ಷ ಸಂಘಟನೆಯ ಕೆಲಸ ಮಾಡುತ್ತೇನೆ.ಸಂಘಟನೆಯ ಹಿರಿಯರು ವಹಿಸಿಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದರು.
ನಾನದನ್ನು ಹೇಳಿಲ್ಲ,ಧ್ವನಿ ತಮ್ಮದಲ್ಲ ಯಾರೋ ಹುಚ್ಚರು ಮಾಡಿದ್ದು ಎಂದು ರಾಜ್ಯಾಧ್ಯಕ್ಷ ಕಟೀಲ್ ಹೇಳಿದ್ದಾರೆ.ಅವರ ಹೇಳಿಕೆಗೆ ನನ್ನ ಸಂಪೂರ್ಣ ಸಹಮತವಿದೆ.
ಆಡಿಯೋದಲ್ಲಿರುವುದನ್ನು ಕಟೀಲ್ ಹೇಳಿಲ್ಲ,ಅವರು ಹೇಳಲು ಸಾಧ್ಯವೂ ಇಲ್ಲ.ಅದು ನಕಲಿ ಆಡಿಯೋ ಎಂದು ಕಟೀಲ್ ಅವರೇ ಹೇಳಿದ ಮೇಲೆ ತನಿಖೆ ಮಾಡುವುದೇನೂ ಉಳಿದಿಲ್ಲ.
ಆದರೆ ತನಿಖೆ ನಡೆಯಲೇಬೇಕು ಎಂದಾದರೆ ತನಿಖೆ ಆಗಲಿ ಎಂದು ಸೂಚ್ಯವಾಗಿ ಹೇಳಿದರು.

 

ಪ್ರಧಾನಿ ಮೋದಿಯವರನ್ನು ನೋಡಲು ದೆಹಲಿಗೆ ಹೋಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ತಮ್ಮೊಂದಿಗೆ ಆರು ಬ್ಯಾಗ್ ಒಯ್ದಿದ್ದರು ಎಂಬ ಮಾಜಿ ಸಿಎಂ‌ ಜೆಡಿಎಸ್‌ನ ಹೆಚ್‌.ಡಿ. ಕುಮಾರಸ್ವಾಮಿ ಆರೋಪಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ,ಎನನ್ನೋ ಪೂರೈಸಿ ಮೋದಿಯವರನ್ನು ತೃಪ್ತಿ ಮಾಡುವ ಲೆವೆಲ್ಲಿನಲ್ಲಿ ಯಡಿಯೂರಪ್ಪ ಇಲ್ಲ,
ಏನನ್ನೋ ಪಡೆದು ನಡೆಯುವಷ್ಟು ಕೆಳಮಟ್ಟದಲ್ಲಿ ಮೋದಿಯವರೂ ಇಲ್ಲ ಎಂದು ಮಾರ್ಮಿಕವಾಗಿ ಈಶ್ವರಪ್ಪ ಹೇಳಿದರು.

, , ,

Leave a Reply

Your email address will not be published. Required fields are marked *