ದೇಶದ ಸ್ವತ್ತುಗಳನ್ನು ಮೋದಿ ಸರ್ಕಾರ ಮಾರಾಟ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ; ರಾಹುಲ್ ಗಾಂಧಿ

ನವದೆಹಲಿ: ಆರ್ಥಿಕ ನಷ್ಟಗಳನ್ನು ತುಂಬಿಕೊಳ್ಳಲು ದೇಶದ ಸ್ವತ್ತುಗಳನ್ನು ಮೋದಿ ಸರ್ಕಾರ ಮಾರಾಟ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಜೀವ ವಿಮಾ ನಿಗಮದ (ಎಲ್‌ಐಸಿ) ಬಂಡವಾಳ ಮಾರಾಟ ಕುರಿತ ವರದಿಗೆ ಸಂಬಂಧಿಸಿ ರಾಹುಲ್ ಈ ಹೇಳಿಕೆ ನೀಡಿದ್ದಾರೆ.

ಮೋದಿ ಜೀ ಅವರು ‘ಸರ್ಕಾರಿ ಕಂಪನಿಗಳ ಮಾರಾಟ’ ಅಭಿಯಾನ ನಡೆಸುತ್ತಿದ್ದಾರೆ. ಅವರೇ ಮಾಡಿಕೊಂಡಿರುವ ಆರ್ಥಿಕ ಅವ್ಯವಸ್ಥೆ ಸರಿಪಡಿಸಲು ಸರ್ಕಾರದ ಆಸ್ತಿಗಳನ್ನು ಒಂದೊಂದಾಗಿ ಮಾರಾಟ ಮಾಡಲಾಗುತ್ತಿದೆ ಎಂದು ರಾಹುಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

‘ಎಲ್‌ಐಸಿಯನ್ನು ಮಾರಾಟ ಮಾಡುವುದು ಜನರ ಭವಿಷ್ಯ ಮತ್ತು ನಂಬಿಕೆಯನ್ನು ಬದಿಗಿಟ್ಟು ಮೋದಿ ಸರ್ಕಾರ ಮಾಡುತ್ತಿರುವ ನಾಚಿಕೆಗೇಡಿನ ಕೆಲಸವಾಗಿದೆ’ ಎಂದೂ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *