ಕರ್ತವ್ಯಕ್ಕೆ ಹಾಜರಾಗಲು ಐಎಸ್‌ಎಸ್‌ಎಫ್ ಸ್ಫರ್ಧಿಗಳಿಗೆ ಬುಲಾವ್

ದೆಹಲಿ: ಪುಲ್ವಾಮಾ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನ ಉಗ್ರರ ನೆಲೆಗಳ ಮೇಲೆ ನಡೆಸಿರುವ ದಾಳಿಯ ಬೆನ್ನಲ್ಲೇ ಉಂಟಾಗಿರುವ ಬಿಗುವಾದ ವಾತಾವರಣದ ಹಿನ್ನಲೆಯಲ್ಲಿ ದೇಶಾದ್ಯಂತ ಹೈ-ಅಲರ್ಟ್ ಘೋಷಿಸಲಾಗಿದೆ.

ಇದರಂತೆ, ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಸ್ಪರ್ಧಿಗಳಾದ ರವಿ ಕುಮಾರ್ ಹಾಗೂ ದೀಪಕ್ ಕುಮಾರ್ ಅವರಲ್ಲಿ ಮರಳಿ ಕರ್ತ ವ್ಯಕ್ಕೆ ಹಾಜರಾಗುವಂತೆ ಭಾರತೀಯ ವಾಯುಪಡೆಯು ಆದೇಶ ಹೊರಡಿಸಿದೆ. ಐಎಎಫ್‌ನಿಂದ ಆದೇಶ ಲಭಿಸಿರುವುದನ್ನು ರವಿ ಕುಮಾರ್ ಸ್ಪಷ್ಟಪಡಿಸಿದ್ದಾರೆ. ದೀಪಕ್ ಕುಮಾರ್ ಹಾಗೂ ರವಿ ಕುಮಾರ್ ದಿಲ್ಲಿಯ ಡಾ ಕಾರ್ನಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದರು.

ನನ್ನ ಸಹೋದ್ಯೋಗಿಗಳೆಲ್ಲರು ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಾನು ಮತ್ತು ದೀಪಕ್ ಮಾತ್ರ ಇಲ್ಲಿದ್ದೇವೆ. ಇಡೀ ವಾಯುಪಡೆ ಕಟ್ಟೆಚ್ಚರ ವಹಿಸುತ್ತಿದೆ. ಹಾಗಾಗಿ ನಮ್ಮನ್ನು ಕರ್ತವ್ಯಕ್ಕೆ ಹಿಂತಿರುವಂತೆ ಕರೆಯಲಾಗಿದೆ. ನಾವೀಗ ಐಎಎಫ್ ಆದೇಶ ಪಾಲಿಸಲಿದ್ದೇವೆ ಎಂದು ರವಿ ಕುಮಾರ್ ಹೇಳಿದ್ದಾರೆ. ಭಾರತೀಯ ಸೇನೆಯಲ್ಲಿ ರವಿ ಹಾಗೂ ದೀಪಕ್ ಗ್ರೌಂಡ್ ಸ್ಟಾಫ್ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *