2020ರ ನಾಗರೀಕ ಸೇವಾ ಮುಖ್ಯ ಪರೀಕ್ಷೆಗಳಿಗೆ ಆಗಸ್ಟ್‌ 2 ರಿಂದ ಸಂದರ್ಶನ

2020ರ ನಾಗರೀಕ ಸೇವಾ ಮುಖ್ಯ ಪರೀಕ್ಷೆಗಳಿಗೆ ಆಗಸ್ಟ್‌ 2 ರಿಂದ ಸಂದರ್ಶನ

 

ನವದೆಹಲಿ, ಜೂನ್‌ 10 2020ರ ನಾಗರೀಕ ಸೇವಾ ಮುಖ್ಯ ಪರೀಕ್ಷೆಗಳಿಗೆ ಆಗಸ್ಟ್‌ 2 ರಿಂದ ಸಂದರ್ಶನ ಆರಂಭವಾಗಲಿದೆ ಎಂದು ಕೇಂದ್ರ ನಾಗರೀಕ ಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ.

ಸಂದರ್ಶನ ಏಪ್ರಿಲ್‌ನಲ್ಲಿ ಆರಂಭವಾಗಿತ್ತಾದರೂ, ದೇಶಾದ್ಯಂತ ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆ ಸೃಷ್ಟಿಸಿದ ಪರಿಸ್ಥಿತಿ ಹಿನ್ನಲೆಯಲ್ಲಿ ಸಂದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು.

ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ ಗಳಿಗೆ ಇ- ಸಮನ್‌ ಪತ್ರಗಳು (ಸಂದರ್ಶನಕ್ಕಾಗಿ) ಶೀಘ್ರದಲ್ಲೇ ಲಭ್ಯವಾಗಲಿವೆ ಎಂದು ಆಯೋಗ ಹೇಳಿದೆ.

ಆಯೋಗದ ವೆಬ್‌ ಸೈಟ್‌ www.upsc.gov.in ಹಾಗೂ www.upsconline.in ಈ -ಸಮನ್‌ ಪತ್ರಗಳನ್ನು ಡೌನ್‌ ಲೋಡ್‌ ಮಾಡಿಕೊಳ್ಳಬಹುದಾಗಿದೆ.
ಅಭ್ಯರ್ಥಿಗಳಿಗೆ ತಿಳಿಸಲಾಗಿರುವ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ದಿನಾಂಕ ಹಾಗೂ ಸಮಯದ ಬದಲಾವಣೆ ಸಂಬಂಧ ಯಾವುದೇ ಮನವಿಯನ್ನುಅಂಗೀಕರಿಸುವುದಿಲ್ಲ. ಕೋವಿಡ್ ದೃಷ್ಟಿಯಿಂದ, ಆಯೋಗ ಹಲವಾರು ಪರೀಕ್ಷೆಗಳನ್ನು ಮುಂದೂಡಿದೆ. ಜೂನ್ 27 ರಂದು ನಡೆಯಬೇಕಿದ್ದ ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆ 2021 ಅನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆ.

 

,

Leave a Reply

Your email address will not be published. Required fields are marked *