ಭಾರತೀಯ ಚಿತ್ರರಂಗ ಒಬ್ಬ ಶ್ರೇಷ್ಠ ನಟನನ್ನು ಕಳೆದುಕೊಂಡಿದೆ: ಅಮಿತ್ ಶಾ

ಭಾರತೀಯ ಚಿತ್ರರಂಗ ಒಬ್ಬ ಶ್ರೇಷ್ಠ ನಟನನ್ನು ಕಳೆದುಕೊಂಡಿದೆ: ಅಮಿತ್ ಶಾ

ನವದೆಹಲಿ, ಜುಲೈ07 ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರಿಂದ ಶೋಕ ಸಂದೇಶ ಹರಿದುಬರುತ್ತಿದೆ. ಭಾರತೀಯ ಚಿತ್ರರಂಗವು ಒಬ್ಬ ಶ್ರೇಷ್ಠ ನಟನನ್ನು ಕಳೆದುಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಸಂತಾಪ ಸೂಚಿಸಿದ್ದಾರೆ. ಅವರು ತಮ್ಮ ಟ್ವೀಟ್ ಸಂದೇಶದಲ್ಲಿ, “ದಿಲೀಪ್ ಕುಮಾರ್ ಅವರು ಬೆಳ್ಳಿ ಪರದೆಯ ನಿಜವಾದ ದಂತಕಥೆಯಾಗಿದ್ದರು, ಭಾರತೀಯ ಚಿತ್ರರಂಗವು ಅಂತಹ ಒಬ್ಬ ಶ್ರೇಷ್ಠ ನಟನನ್ನು ಕಳೆದುಕೊಂಡಿದೆ. ಅವರು ತಮ್ಮ ಅದ್ಭುತ ನಟನೆ ಮತ್ತು ಅಪ್ರತಿಮ ಪಾತ್ರಗಳಿಂದ ತಲೆಮಾರಿನ ಸಿನೆಮಾ ಪ್ರಿಯರನ್ನು ರಂಜಿಸಿದ್ದಾರೆ. ದಿಲೀಪ್ ಜಿ ಕುಟುಂಬ ಮತ್ತು ಅನುಯಾಯಿಗಳಿಗೆ ನನ್ನ ಪ್ರಾಮಾಣಿಕ ಸಂತಾಪ. “ಟ್ರ್ಯಾಜಿಡಿ ಕಿಂಗ್” ಎಂದೇ ಜನಪ್ರಿಯವಾಗಿರುವ 98 ವರ್ಷದ ನಟ ಕಳೆದ ಕೆಲವು ವಾರಗಳಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಅವರು ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಡಿಸ್ಚಾರ್ಜ್ ಆದ ಕೆಲ ದಿನಗಳ ನಂತರ ವಯೋಸಹಜ ಸಮಸ್ಯೆಗಳಿಂದಾಗಿ ಮತ್ತೆ ದಿಲೀಪ್ ಕುಮಾರ್ ಅವರನ್ನು ಅದೇ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

, ,

Leave a Reply

Your email address will not be published. Required fields are marked *