ಥಾಮಸ್ ಕಪ್‌: 43 ವರ್ಷಗಳ ಬಳಿಕ ಭಾರತ ಸೆಮಿಫೈನಲ್‌ಗೆ ಪ್ರವೇಶ

ಬ್ಯಾಂಕಾಕ್: ಮೇ 13 (ಉದಯಕಾಲ ನ್ಯೂಸ್) ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡವು ಗುರುವಾರ ಮಲೇಷ್ಯಾವನ್ನು 3-2 ಗೋಲುಗಳಿಂದ ಸೋಲಿಸಿ 43 ವರ್ಷಗಳ ಬಳಿಕ ಥಾಮಸ್ ಕಪ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದೆ.

ಥಾಮಸ್ ಕಪ್ ನಲ್ಲಿ ಭಾರತ ಈ ಹಿಂದೆ ಅಂದರೆ 1952, 1955 ಮತ್ತು 1979 ರಲ್ಲಿ ಮೂರು ಬಾರಿ ಸೆಮಿಫೈನಲ್ ತಲುಪಿ.ತ್ತು 2020ರ ಹಿಂದಿನ ಆವೃತ್ತಿಯ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ಸೋತಿತ್ತು. ದಕ್ಷಿಣ ಕೊರಿಯಾ ಮತ್ತು ಡೆನ್ಮಾರ್ಕ್ ನಡುವಿನ ಪಂದ್ಯದ ವಿಜೇತರನ್ನು ಭಾರತ ಸೆಮಿಫೈನಲ್‌ನಲ್ಲಿ ಎದುರಿಸಲಿದೆ.

ಕಿಡಂಬಿ ಶ್ರೀಕಾಂತ್, ಹೆಚ್ ಎಸ್ ಪ್ರಣೋಯ್ ಮತ್ತು ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿಯು ತಮ್ಮ ತಮ್ಮ ಪಂದ್ಯಗಳನ್ನು ಗೆದ್ದು ಭಾರತವನ್ನು ಸೆಮಿಫೈನಲ್‌ಗೆ ಕೊಂಡೊಯ್ದರು. ವಿಶ್ವ ನಂ.7 ಆಟಗಾರ ಲಕ್ಷ್ಯ ಸೇನ್ ತಮ್ಮ ಪಂದ್ಯದಲ್ಲಿ ಸೋತರು.

Leave a Reply

Your email address will not be published. Required fields are marked *