ಎಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಆಲಯ ಕಮಿಟಿ ಚೇರ್ಮನ್ ಎನ್.‌ ರಘುವೀರಾ ರೆಡ್ಡಿಯವರ ನೇತೃತ್ವದಲ್ಲಿ ನೀಲಕಂಠೇಶ್ವರ ದೇವಸ್ಥಾನದ ಪ್ರಾರಂಭೋತ್ಸವ

ಎಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಆಲಯ ಕಮಿಟಿ ಚೇರ್ಮನ್ ಎನ್.‌ ರಘುವೀರಾ ರೆಡ್ಡಿಯವರ ನೇತೃತ್ವದಲ್ಲಿ ನೀಲಕಂಠೇಶ್ವರ ದೇವಸ್ಥಾನದ ಪ್ರಾರಂಭೋತ್ಸವ

ಮಧುಗಿರಿ : ರಾಜ್ಯದ ಗಡಿಗೆ ಹೊಂದಿಕೊಂಡಿರುವ ಸೀಮಾಂದ್ರದ ಮಡಕಸಿರಾ ತಾಲೂಕಿನ ನೀಲಕಂಠಾಪುರ ಗ್ರಾಮದಲ್ಲಿ ಎಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಆಲಯ ಕಮಿಟಿ ಚೇರ್ಮನ್ ಎನ್.‌ ರಘುವೀರಾ ರೆಡ್ಡಿಯವರ ನೇತೃತ್ವದಲ್ಲಿ ನೀಲಕಂಠೇಶ್ವರ ದೇವಸ್ಥಾನದ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.

ಕಾರ್ಯಕ್ರಮದ 4 ನೇ ದಿನದ ಅಂಗವಾಗಿ ಬೆಳಗ್ಗೆ 10.30 ಕ್ಕೆ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಪುಶ್ಕರಣಿಯಲ್ಲಿ ಗಂಗಾಪೂಜೆ, ನೂತನ ದೇವತಾ ಮೂರ್ತಿಗಳಾದ ಶ್ರೀ ಬಾಲಗಣಪತಿ, ಶ್ರೀ ವಿಜಯ ಗಣಪತಿ, ಪಂಚಮುಖಿ ಆಂಜನೇಯಸ್ವಾಮಿ, ಶ್ರೀ ಸತ್ಯನಾರಾಯಣ ಸ್ವಾಮಿ, ಸುಬ್ರಹ್ಮಣ್ಯ ಸ್ವಾಮಿ, ಅಯ್ಯಪ್ಪಸ್ವಾಮಿ, ಶಿರಡಿ ಸಾಯಿಬಾಬಾ ಸ್ವಾಮಿಯವರಿಗೆ 12 ಹೋಮಕುಂಡಗಳ ಬಳಿ 32 ದಂಪತಿಗಳ ಕೈಯಲ್ಲಿ ವೇದಪಾರಾಯಣ, ಮೂರ್ತಿ ಹೋಮ, ಶ್ರೀ ವಿಷ್ಣು ಸಹಸ್ರನಾಮ ಹೋಮ, ಸುದರ್ಶನ ಹೋಮ, ರುದ್ರಹೋಮ, ವಿಮಾನ ಗೋಪುರ ಮತ್ತು ರಾಜಗೋಪುರ ಅದಿ ದೇವತೆಗಳ ಹೋಮ, ಪುರುಷ ಸೂಕ್ತ, ಸ್ತ್ರೀ ಸೂಕ್ತ, ಪರಿವಾರ ದೇವತಾ ಹೋಮ ಹಾಗೂ ಸುಕೃತ್ ಪೂರ್ಣಾಹುತಿ ಹೋಮ ಕಾರ್ಯ ನೆರವೇರಿಸಲಾಯಿತು.

ಮದ್ಯಾಹ್ನ 1 ಗಂಟೆಗೆ ನೂತನ ವಿಗ್ರಹಗಳಿಗೆ ದಾನ್ಯಗಳ ಪೂಜೆ, ಮಹಾ ಮಂಗಳಾರತಿ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ದೈವ ಕಾರ್ಯದಲ್ಲಿ ಎನ್. ರಘುವೀರಾರೆಡ್ಡಿ ಕುಟುಂಬದವರು, ಜಿ.ವಿ ಪಾಳ್ಯಂ ಮತ್ತು ಜಿ.ವಿ ಪುರಂ ಗ್ರಾಮದ ಭಕ್ತಾಧಿಗಳು ಭಾಗವಹಿಸಿದ್ದರು.

ಪೋಟೋ 22 ಎಂಡಿಜಿ 02 : ಸೀಮಾಂದ್ರದ ಮಡಕಸಿರಾ ತಾಲೂಕಿನ ನೀಲಕಂಠಾಪುರ ಗ್ರಾಮದಲ್ಲಿ ಎಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಆಲಯ ಕಮಿಟಿ ಚೇರ್ಮನ್ ಎನ್.‌ ರಘುವೀರಾ ರೆಡ್ಡಿಯವರ ನೇತೃತ್ವದಲ್ಲಿ ನೀಲಕಂಠೇಶ್ವರ ದೇವಸ್ಥಾನದ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.

ದೇವಸ್ಥಾನದ ಇತಿಹಾಸ : ನೀಲಕಂಠ ಪುರ ಗ್ರಾಮವು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ವಲಯದಲ್ಲಿ ಕರ್ನಾಟಕ ಗಡಿಯಲ್ಲಿರುವ ಒಂದು ದೇವಾಲಯವಾಗಿದೆ. ನೀಲಕಂಠೇಶ್ವರ ಸ್ವಾಮಿ ದೇವಾಲಯವು ಬಹಳ ಪ್ರಾಚೀನವಾಗಿದೆ. 1200 ವರ್ಷದ ಹಿಂದೆ ಪೂತುಗುಂಡು ಪಟ್ಟಣದಿಂದ ದೇವರನ್ನು ಈಗ ಇರುವ ಸ್ಥಳಕ್ಕೆ ತಂದು ಪ್ರತಿಷ್ಠೆ ಮಾಡಲಾಗಿದೆ. ನೀಲಕಂಠೇಶ್ವರ ಸ್ವಾಮಿಯ ಹೆಸರಿನ ಮೇಲೆ ಈ ಗ್ರಾಮಕ್ಕೆ ನೀಲಕಂಠಪುರ ಎಂದು ನಾಮಕರಣ ಮಾಡಿದರು. ಈ ಪ್ರದೇಶಕ್ಕೆ ಭೇಟಿ ನೀಡಿದ ಪುರಾತತ್ವ ತಜ್ಞರು ದೇವರನ್ನು ಇಲ್ಲಿನ ಸುತ್ತಮುತ್ತ ಜನರು ಸುಮಾರು 1200 ವರ್ಷಗಳಿಂದ ಪೂಜಿಸುತ್ತಿದ್ದರೆಂದು ನಂಬುತ್ತಾರೆ.

1976 ರಲ್ಲಿ ಅಂದರೆ 45 ವರ್ಷಗಳ ಹಿಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮಾಜಿ ಸಂಸತ್ ಸದಸ್ಯರಾದ ದಿವಂಗತ ಶ್ರೀರಾಮರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರು ಪ್ರಾಚೀನ ದೇವಾಲಯ ವನ್ನು ಪುನಃ ಸ್ಥಾಪಿಸಲು ನಿರ್ಧಾರಿಸಿದರು. ಸುತ್ತಮುತ್ತಲಿನ ಜನರ ಸಹಾಯದಿಂದ ಹಳೆಯ ದೇವಾಲಯವನ್ನು ನವೀಕರಿಸಲಾಯಿತು. ಮತ್ತು 1982 ರಲ್ಲಿ ಹೊಸ ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯ ಸಂಕೀರ್ಣವನ್ನು ಶ್ರೀ ನೀಲಕಂಠೇಶ್ವರ ಸ್ವಾಮಿ, ಶ್ರೀ ಪಾರ್ವತಿ ದೇವಿ, ಶ್ರೀಲಕ್ಷ್ಮೀನರಸಿಂಹಸ್ವಾಮಿ, ಶ್ರೀ ಸೀತಾ ರಾಮ ಲಕ್ಷ್ಮಣ ಆಂಜನೇಯಸ್ವಾಮಿ,( ಕೋದಂಡರಾಮಸ್ವಾಮಿ) ಶ್ರೀ ಲಕ್ಷ್ಮಿರಂಗನಾಥ ಸ್ವಾಮಿ, ಶ್ರೀ ವೇಣುಗೋಪಾಲಸ್ವಾಮಿ, ಮತ್ತು ನವಗ್ರಹಗಳ ಪ್ರತಿಷ್ಠಾಪನೆ ಮಾಡಿ ಇಂದಿನವರೆಗೂ ನಿತ್ಯಪೂಜೆ ಕಾರ್ಯಕ್ರಮಗಳು ಸಕ್ರಮವಾಗಿ ನಡೆಯಲಿದೆ.

1999 ರಲ್ಲಿ ದಿವಂಗತ ನೀಲಕಂಠಪುರ ಶ್ರೀರಾಮರೆಡ್ಡಿಯವರ ಕುಟುಂಬ ಸದಸ್ಯರು ಮತ್ತು ಈ ಪ್ರದೇಶದ ಜನರು ಶ್ರೀ ಸರಸ್ವತಿ ದೇವಾಲಯವನ್ನು ಇದೇ ದೇವಾಲಯದ ಸಂಕೀರ್ಣದಲ್ಲಿ 2004ರಲ್ಲಿ ಪ್ರತಿಷ್ಠಾಪನೆ ಮಾಡಿ, ಈ ದೇವಾಲಯದಲ್ಲಿ ಕೂಡ ಪ್ರತಿ ದಿನ ನಿತ್ಯ ಪೂಜೆಗಳು ನಡೆಯುತ್ತದೆ.
ಈ ದೇವಾಲಯಗಳಿಗೆ ಆಂದ್ರ ರಾಜ್ಯದಿಂದ ಮಾತ್ರವಲ್ಲದೆ, ನೆರೆ ರಾಷ್ಟ್ರವಾದ ಕರ್ನಾಟಕದಿಂದಲೂ ಭಕ್ತರು ಭೇಟಿ ನೀಡುತ್ತಾರೆ. ವಿಶೇಷವಾಗಿ ವಿವಿಧ ಸಂದರ್ಭಗಳಲ್ಲಿ, ಈ ದೇವಾಲಯಗಳಿಗೆ ಭೇಟಿ ನೀಡಿದ ಪ್ರಮುಖರಲ್ಲಿ ಶ್ರೀ ನೀಲಂ ಸಂಜೀವ ರೆಡ್ಡಿ, ಶ್ರೀ ಕಾಸು ಬ್ರಹ್ಮಾನಂದ ರೆಡ್ಡಿ, ಶ್ರೀ ಜಲಗಂ ವೆಂಗಳರಾವ್, ಶ್ರೀ ವೈ ಎಸ್ ರಾಜಶೇಖರ ರೆಡ್ಡಿ, (2006 ರಲ್ಲಿ ಕುಂಬಾಭಿಷೇಕ ನಡೆಸಿದವರು) ಶ್ರೀ ಕೊನಿಜೇಟಿ ರೋಸಯ್ಯ, ಶ್ರೀ ನಲ್ಲಾರಿ ಕಿರಣ್ ಕುಮಾರ್ ರೆಡ್ಡಿ, ಮತ್ತು ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ನಿಜಲಿಂಗಪ್ಪನವರು, ಮತ್ತು ವೀರೇಂದ್ರ ಪಾಟೀಲ್, ವೀರಪ್ಪ ಮೊಯ್ಲಿ ಸಹ ಇದ್ದಾರೆ.

ಅಂದಿನ ರಾಜ್ಯಪಾಲರು ಪೆಂಡೆಕಂಠಿ ವೆಂಕಟಸುಬ್ಬಯ್ಯ, ಕೃಷ್ಣಕಾಂತ್, ಸಾಮೂಹಿಕ ವಿವಾಹಗಳಲ್ಲಿ ಭಾಗವಹಿಸಿದ್ದರು. ಈ ಎಸ್ ಎಲ್ ನರಸಿಂಹನ್ ಮತ್ತು ಪ್ರಖ್ಯಾತ ಪೀಠಾಧಿಪತಿಗಳಾದ ಶ್ರೀ ತಿರುಚಿ ಸ್ವಾಮಿಗಳು, ಶ್ರೀ ಶೃಂಗೇರಿ ಶಾರದಾಪೀಠ ಶ್ರೀ ಭಾರತಿ ತೀರ್ಥ ಸ್ವಾಮಿಗಳು, ಶ್ರೀ ಸಿದ್ದಗಂಗಾ ಸ್ವಾಮೀಜಿಗಳು, ಶ್ರೀ ನಂಜಾವಧೂತ ಸ್ವಾಮಿಗಳು, ಶ್ರೀ ಶಿವಗಂಗಾ ಸ್ವಾಮಿಗಳು, ಶ್ರೀ ಜಪಾನಂದ ಸ್ವಾಮಿಗಳು ಸರಸ್ವತಿ ದೇವಾಲಯದ ಉದ್ಘಾಟನೆ ಸಮಯದಲ್ಲಿ ಮತ್ತು ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ-ತಮಿಳುನಾಡು, ಇತರ ರಾಜ್ಯಗಳ ಗಣ್ಯರು ಈ ದೇವಾಲಯಗಳಿಗೆ ಭೇಟಿ ನೀಡಿದವರಲ್ಲಿ ಇವರು ಕೂಡ ಇದ್ದಾರೆ.

ನಿರಂತರವಾಗಿ ಬರಗಾಲದಿಂದ ಬಳಲುತ್ತಿರುವ ಈ ಪ್ರದೇಶದ ಜನರು ತಮ್ಮ ಮಕ್ಕಳ ಮದುವೆಗಾಗಿ ಸಾಲದಲ್ಲಿ ಇರಬಾರದೆಂದು, ದಿವಂಗತ ಶ್ರೀರಾಮರೆಡ್ಡಿಯವರು ಪ್ರತಿ ಶ್ರೀರಾಮನವಮಿ ಹಬ್ಬದ ಸಂದರ್ಭದಲ್ಲಿ ಸೀತಾರಾಮ ಕಲ್ಯಾಣ ಜೊತೆಗೆ ಉಚಿತ ಸಾಮೂಹಿಕ ವಿವಾಹಗಳನ್ನು 1982ರಿಂದ 2020ರ ವರೆಗೆ ಸುಮಾರು 4151 ಮದುವೆಗಳನ್ನು ನಿರ್ವಹಿಸಿದರು. ಆದರೆ 2021ರಲ್ಲಿ ಶ್ರೀರಾಮನವಮಿಯ ಸಂದರ್ಭದಲ್ಲಿ ಕರೋನ ಸಾಂಕ್ರಾಮಿಕ ರೋಗದಿಂದ ಸಾಮೂಹಿಕ ವಿವಾಹಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಪ್ರತಿ ವರ್ಷ ರಘುವೀರಾ ರೆಡ್ಡಿ ಕುಟುಂಬದವರು ವಧು- ವರರಿಗಾಗಿ ಹೊಸ ಬಟ್ಟೆ ಮತ್ತು ತಾಳಿ ಬೊಟ್ಟು, ವಿಶೇಷ ಜನವಾಹಿನಿಗಾಗಿ, ಅನ್ನದಾನ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ ಮತ್ತು ದೇವಾಲಯದ ಆವರಣದಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಿ, ಬಡವರಿಗಾಗಿ ಕಲ್ಯಾಣ ಮಂಟಪವನ್ನು ಉಚಿತವಾಗಿ ಕೊಡುತ್ತಿದ್ದಾರೆ.

ದಸರಾ ನವರಾತ್ರಿಯಂದು ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ವಿಜಯದಶಮಿ ದಿನದಂದು, ಜಂಬೂಸವಾರಿಯನ್ನು ಆಯೋಜಿಸುತ್ತಾರೆ. ಈ ಸಂದರ್ಭದಲ್ಲಿ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉತ್ತಮ ರೈತರು ಮತ್ತು ಅತ್ಯುತ್ತಮ ಗೋವುಗಳಿಗೆ ಉಡುಗೊರೆಗಳನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ವೈಕುಂಠ ಏಕಾದಶಿ, ಮಹಾ ಶಿವರಾತ್ರಿ, ಶ್ರೀಕೃಷ್ಣಜನ್ಮಾಷ್ಟಮಿ, ಶ್ರೀ ನರಸಿಂಹ ಜಯಂತಿ, ಶ್ರೀಹನುಮಜಯಂತಿ, ಶ್ರೀ ಹನುಮದ್ವ್ರತ, ಶ್ರಾವಣ ಮಾಸ ಹಾಗೂ ಕಾರ್ತಿಕ ಮಾಸದ ತಿಂಗಳುಗಳಲ್ಲಿ ವಿಶೇಷ ಪೂಜೆಗಳನ್ನು ಮತ್ತೆ ಪ್ರತಿ ಹುಣ್ಣಿಮೆಯ, ಏಕಾದಶಿಯಂದು, ಶ್ರೀ ಸತ್ಯನಾರಾಯಣ ಸ್ವಾಮಿಯ ವೃತ ಮತ್ತು ಶ್ರೀ ಪಂಚಮಿಯಂದು ಚಿಕ್ಕಮಕ್ಕಳಿಗೆ ಅಕ್ಷರಾಭ್ಯಾಸವನ್ನು ಉಚಿತವಾಗಿ ಮಾಡಲಾಗುತ್ತದೆ. ಇಲ್ಲಿ ಇರುವ ಸರಸ್ವತಿ ದೇವಾಲಯದಲ್ಲಿ ಮಕ್ಕಳ ಅಕ್ಷರ ಅಭ್ಯಾಸಕ್ಕಾಗಿ ಕರ್ನಾಟಕ ರಾಜ್ಯದ ಬಳ್ಳಾರಿ, ಹಿರಿಯೂರು, ಚಿತ್ರದುರ್ಗ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಜನರು ಬರುತ್ತಾರೆ.

ಕಳೆದ ಎರಡು ವರ್ಷಗಳಲ್ಲಿ ಶ್ರೀ ನೀಲಕಂಠಪುರ ರಘುವೀರರೆಡ್ಡಿ ಅವರು ಕುಟುಂಬ ಸದಸ್ಯರು ಮತ್ತು ಸುತ್ತಮುತ್ತಲಿನ ಜನರು ಈ ದೇವಾಲಯದಲ್ಲಿ ಕೈಜೋಡಿಸಿ ದೇವಾಲಯಗಳನ್ನು ನವೀಕರಿಸಲು ಹಾಗೂ ಶ್ರೀ ವಿಜಯ ಗಣಪತಿ, ಶ್ರೀರಮಾ ಸಮೇತ ಶ್ರೀ ಸತ್ಯನಾರಾಯಣ ಸ್ವಾಮಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ,ಶ್ರೀ ಶಿರಡಿ ಸಾಯಿಬಾಬಾ, ಹಾಗೂ ಸುಮಾರು 50 ಅಡಿ ಎತ್ತರದ ವಿಗ್ರಹ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ದೇವಾಲಯಗಳನ್ನು ನಿರ್ಮಿಸಲು ನಿರ್ಧರಿಸಿ, ಮತ್ತು ನಿರ್ಮಾಣ ಕಾರ್ಯವು ದೇವಾಲಯದಲ್ಲಿ ಪೂರ್ಣಗೊಂಡಿದೆ. ದೇವಾಲಯ ಸಂಕೀರ್ಣ ಮತ್ತು ಶ್ರೀ ಸರಸ್ವತಿ ದೇವಿ ದೇವಸ್ಥಾನ, ಶ್ರೀ ಪಾರ್ವತಿ ದೇವಿಯ ದೇವಸ್ಥಾನಗಳಲ್ಲಿ, ಶ್ರೀಚಕ್ರಗಳನ್ನು, ಪ್ರತಿಷ್ಠಾಪಿಸಲಾಗುತ್ತದೆ. ಇದರೊಂದಿಗೆ ದೇವಾಲಯ ಸಂಕೀರ್ಣವು 15 ಗರ್ಭಗುಡಿಗಳನ್ನು ಹೊಂದಿರುವ ವಿಶಾಲವಾದ ಪ್ರದೇಶ, ಹಾಗೂ ಅತಿ ದೊಡ್ಡ ದೇವಾಲಯ ಸಂಕೀರ್ಣವಾಗಿದೆ. ಜೊತೆಗೆ ನೇಪಾಳದ ಗಂಡಕಿ ನದಿಯ ಪವಿತ್ರ ಸಾಲಿಗ್ರಾಮಗಳು ಸಂಗ್ರಹವಾಗಿದೆ. ದೇವಾಲಯಗಳ ಪ್ರತಿಷ್ಠೆಯ ದಿನದಂದು ಎಲ್ಲಾ ಗರ್ಭಗುಡಿಗಳಲ್ಲಿ ಇವುಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.

ಈ ದೇವಾಲಯವನ್ನು ಸಂಪೂರ್ಣವಾಗಿ ಆಗಮಶಾಸ್ತ್ರಕ್ಕೆ, ಅನುಗುಣವಾಗಿ ನಿರ್ಮಿಸಲಾಗಿದೆ. ಹೊಸ ದೇವಾಲಯವು ನಾಲ್ಕು ಬೀದಿಗಳು, ನಾಲ್ಕು ದಿಕ್ಕುಗಳು, ಮತ್ತು ನಾಲ್ಕು ಪ್ರವೇಶದ್ವಾರ ಗಳಿಂದ ಆವೃತವಾಗಿದೆ. ಈ ದೇವಾಲಯದ ನಿರ್ಮಾಣದ ಸಮಯದಲ್ಲಿ ವೈಕುಂಠ ದ್ವಾರ ವಿಶೇಷವಾಗಿ ಸುಂದರವಾಗಿ ನಿರ್ಮಿಸಲಾಗಿದೆ. ಈ ದೇವಾಲಯವು ಚೋಳ, ಚಾಲುಕ್ಯ, ನೊಳಂಬ, ವಿಜಯನಗರದ ಕಾಲದ ಶೈಲಿಯನ್ನು ಸುಮಾರು 162 ಸ್ತಂಭಗಳೂಂದಿಗೆ ಅನುಕರಿಸುತ್ತದೆ.

ದೇವಾಲಯದ ಈಶಾನ್ಯ ಭಾಗದಲ್ಲಿರುವ ಸುಂದರವಾದ ಪುಷ್ಕರಣಿ, ಆಗ್ನೇಯ ದಿಕ್ಕಿನಲ್ಲಿ (ಜಿಲ್ಲೆಯಲ್ಲಿ ಇಂದಿನವರೆಗೂ ಎಲ್ಲಿ ಇರದಂತಹ) ಯಾಗಶಾಲೆ ನಿರ್ಮಿಸಲಾಯಿತು. ಈದೇವಾಲಯಕ್ಕೆ ಸಂಬಂಧಿಸಿದಂತೆ ಸುಮಾರು 50 ಅಡಿ ಎತ್ತರದ ಪಂಚಮುಖಿ ಆಂಜನೇಯಸ್ವಾಮಿ ಯ ವಿಗ್ರಹವನ್ನು ದೇವಾಲಯಕ್ಕೆ ಜೋಡಿಸಲಾಗಿ ನಿರ್ಮಾಣ ಪೂರ್ತಿ ಗೊಂಡಿದೆ. ವಿಗ್ರಹದ ಸುತ್ತಲೂ ಸುಂದರವಾದ ಮಂಟಪಗಳನ್ನು ನಿರ್ಮಿಸಿ ಅದರ ಒಳಗೆ ರಾಮಾಯಣದ ಘಟ್ಟಗಳನ್ನು ಶಿಲ್ಪಗಳ ರೂಪದಲ್ಲಿ ನಿರ್ಮಿಸಲಾಗಿದೆ.

, ದೇವಾಲಯದ ನಿರ್ಮಾಣಕ್ಕೆ ಸುಮಾರು 1.4 ಲಕ್ಷ ಭಕ್ತರು ಸ್ವಯಂ ಪ್ರೇರಣೆಯಿಂದ ನೆರವಿನ ಹಸ್ತ ಚಾಚಿದ್ದಾರೆ. ದೇವಾಲಯ ನಿರ್ಮಾಣದ ಇಟ್ಟಿಗೆಗಳನ್ನು ಶ್ರೀಶೈಲ ಬ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿಯ ದೇವಾಲಯ, ಶ್ರೀ ಕಾಶಿ ವಿಶ್ವನಾಥ ದೇವಾಲಯ, ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ, ಶ್ರೀ ಮಹಾನಂದಿ ದೇವಾಲಯ, ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ಕಾಣಿಪಾಕಂ ಶ್ರೀ ವರಸಿದ್ದಿ ವಿನಾಯಕ ದೇವಾಲಯ, ಭದ್ರಾಚಲ ಶ್ರೀ ಸೀತಾ ರಾಮ ಚಂದ್ರ ಸ್ವಾಮಿ ದೇವಾಲಯ, ವಿಜಯವಾಡ ಶ್ರೀ ಕನಕದುರ್ಗ ದೇವಾಲಯ, ಅನ್ನವರಂ ಶ್ರೀ ಸತ್ಯನಾರಾಯಣ ಸ್ವಾಮಿ ದೇವಾಲಯ, ಶ್ರೀ ಸಿಂಹಾಚಲ ಶ್ರೀ ಅಪ್ಪಣ್ಣ ಸ್ವಾಮಿ ದೇವಾಲಯ, ಶ್ರೀ ಅರಸವಲ್ಲಿ ಶ್ರೀ ಸೂರ್ಯನಾರಾಯಣ ಸ್ವಾಮಿ ದೇವಾಲಯ, ಉಡುಪಿ ಶ್ರೀಕೃಷ್ಣ ದೇವಾಲಯ, ಶ್ರೀ ಶೃಂಗೇರಿ ಶ್ರೀ ಶಾರದಾಂಬ ದೇವಾಲಯ, ನಂಜನಗೂಡು ಶ್ರೀ ನಂಜುಂಡೇಶ್ವರ ದೇವಸ್ಥಾನ, ಮೈಸೂರು ನಲ್ಲಿರುವ ಶ್ರೀ ಚಾಮುಂಡಿ ದೇವಿಯ ದೇವಾಲಯ, ಶ್ರೀರಂಗಪಟ್ಟಣ ಶ್ರೀ ರಂಗನಾಥ ಸ್ವಾಮಿ ದೇವಾಲಯ ಇತ್ಯಾದಿ ದೇವಾಲಯಗಳಿಗೆ ಹೊತ್ತೊಯ್ದು ಪೂಜಿಸಲಾಗಿದೆ. ಮತ್ತು ಪವಿತ್ರ ನದಿಗಳಾದ ಗಂಗಾ, ಯಮುನಾ, ಗೋದಾವರಿ, ಕೃಷ್ಣ, ಕಾವೇರಿ, ನೇತ್ರಾವತಿ, ತುಂಗಭದ್ರ, ಪಂಪ, ಕಬಿನಿ, ಪಾಪವಿನಸಿನಿ ಮುಂತಾದ ಪವಿತ್ರ ನದಿ ನೀರನ್ನು ಸಂಗ್ರಹಿಸಿ ಸುಮಾರು ಎರಡು ಎಕರೆ ವಿಸ್ತೀರ್ಣ ಹೊಂದಿರುವ ದೇವಾಲಯದ ಆವರಣದ ನಿರ್ಮಾಣದಲ್ಲಿ ದೇವಾಲಯಗಳಿಗೆ ಬಳಸಲಾಯಿತು. ದೇವಾಲಯಗಳಿಂದ ಒಂದು ಫರ್ಲಾಂಗ್ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 504 E ನಿರ್ಮಾಣದ ಹಂತದಲ್ಲಿದೆ.

ಹೊಸದಾಗಿ ಪುನರ್ ನಿರ್ಮಾಣಗೊಂಡ ಮತ್ತು ಹೊಸದಾಗಿ ನಿರ್ಮಿಸಲಾದ ದೇವಾಲಯಗಳ ಉದ್ಘಾಟನೆ ಜೂನ್ 19 ,2021 ರಿಂದ ಜೂನ್ 23, 2021ರ ನಡುವೆ ಶಾಸ್ತ್ರೋಕ್ತವಾಗಿ ಎಲ್ಲರ ಸಮ್ಮುಖದಲ್ಲಿ ನಡೆಸುವ ಉದ್ದೇಶವಿತ್ತು, ಆದರೆ ಈ ಆಸೆಯನ್ನು ಕರೋನ ಸಾಂಕ್ರಾಮಿಕವು ವಿಫಲಗೊಳಿಸಿದೆ. ಆದ್ದರಿಂದ ಈ ಪ್ರತಿಷ್ಠೆಯ ಕಾರ್ಯಕ್ರಮವನ್ನು ಪೂರ್ಣ ಮುನ್ನೆಚ್ಚರಿಕೆಗಳೂಂದಿಗೆ, ಸೀಮಿತ ಸಂಖ್ಯೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

Leave a Reply

Your email address will not be published. Required fields are marked *